ಬೆಂಗಳೂರು: ಕೇರಳ ಹಾಗೂ ಉತ್ತರಾಖಂಡದಲ್ಲಿ ರಣ ಮಳೆ ಸುರಿಯುತ್ತಿದೆ. ಕರ್ನಾಟಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಸಹ ಮಳೆಯಾರ್ಭಟ ಜೋರಾಗಿದೆ. ಕೇರಳದಲ್ಲಿ ಸರಿಸುಮಾರು 26 ಸ್ಥಳಗಳಲ್ಲಿ ಪ್ರವಾಹದ ಅಪಾಯವಿದೆ ಎಂದು ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 50ಕ್ಕೆ ಸಮೀಪಿಸುತ್ತಿದೆ. ಅಕ್ಟೋಬರ್ 18ರಿಂದ ಹೈದರಾಬಾದ್‌ನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 1960ರಿಂದ ಇದುವರೆಗೆ ಅತಿ ಹೆಚ್ಚು ಮಳೆ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. 1960ರಲ್ಲಿ ಒಟ್ಟು 93.4 ಮಿಮೀ ಮಳೆ ದಾಖಲಾಗಿತ್ತು, ಇದೇ ತಿಂಗಳ 20ರಂದು 94.6 ಮಿಮೀ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಅಕ್ಟೋಬರ್‌ನಲ್ಲಿ ಕಡಿಮೆಯಾಗುತ್ತೆ. ಆದರೆ,ಸದ್ಯ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದಕ್ಕೆ ಕಾರಣವೇನು? ದೇಶದ ವಿವಿಧ ಭಾಗಗಳಲ್ಲಿನ ಭಾರೀ ಮಳೆಗೆ ಮೂರು ಮುಖ್ಯ ಕಾರಣಗಳಿವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಮೊದಲನೆಯದು ಕಡಿಮೆ ಒತ್ತಡ, ಎರಡನೆಯದು ಮಾನ್ಸೂನ್ ಹಿಂಪಡೆಯುವಿಕೆಯ ವಿಳಂಬ, ಮತ್ತು ಮೂರನೆಯದು ವಾಯುವ್ಯದಿಂದ ಬೀಸುತ್ತಿರುವ ಬಲವಾದ ಗಾಳಿ. ಈ ಮೂರು ಬೆಳವಣಿಗೆಗಳು ಪ್ರತಿ ಪ್ರದೇಶದ ಮೇಲೆ ವಿಶಿಷ್ಟ ಪರಿಣಾಮವನ್ನು ಬೀರುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಸತತ ಮೂರು ದಿನಗಳವರೆಗೆ 5 ಮಿ.ಮೀ. ಶೇ.60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಡಿಮೆ ಮಳೆಯಾಗಿದೆ. ಮುಂಗಾರು ಮಾರುತವು ಕೇರಳ ಮತ್ತು ದಕ್ಷಿಣ ಕರ್ನಾಟಕದ ಮೂಲಕ ಹಾದು ಜುಲೈ ಎರಡನೇ ವಾರದಲ್ಲಿ ರಾಜಸ್ಥಾನದ ಬಿಕನೇರ್ ತಲುಪುತ್ತದೆ. ಇದರೊಂದಿಗೆ, ಮುಂಗಾರು ಭಾರತದಾದ್ಯಂತ ಹರಡಿದೆ ಎಂದು ಐಎಂಡಿ ಅಂದು ಘೋಷಿಸಿತ್ತು. ಮುಂಗಾರು ಮಾರುತಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ನಿಧಾನಗತಿಯಲ್ಲಿ ಸಾಗುತ್ತವೆ. ಸತತವಾಗಿ ಐದು ದಿನಗಳ ಕಾಲ ಮಳೆ ಇರುವುದಿಲ್ಲ. ಈ ಸಮಯದಲ್ಲಿ ಮಾರುತಗಳು ದಿಕ್ಕನ್ನು ಬದಲಾಯಿಸಿದರೆ ಹಿಂಗಾರು ಆರಂಭವಾಗುತ್ತದೆ ಎಂದು ಐಎಂಡಿ ಪ್ರಕಟಿಸಿತ್ತು.ಆದರೆ, ಹೈದರಾಬಾದಿನ ಹವಾಮಾನ ಇಲಾಖೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ನಾಗರತ್ನರವರ ಪ್ರಕಾರ, ಮಾರುತಗಳು ದಿಕ್ಕನ್ನು ಬದಲಾಯಿಸಲು ವಿಳಂಬ ಮಾಡಿದರ ಪರಿಣಾಮ ಹಿಂಗಾರು ಮಳೆ ಪ್ರಾರಂಭವಾಗಲು ನಿಧಾನವಾಗಿದೆ.

ಮಾರುತಗಳ ಹಿಂಜರಿತದ ವಿಳಂಬದಿಂದಾಗಿ ತೆಲಂಗಾಣ ಮತ್ತು ಉತ್ತರ ಭಾರತದಲ್ಲಿ ಇನ್ನೂ ಮಳೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ ಪರಿವರ್ತನೆಯ ಅವಧಿ ತೆಲಂಗಾಣದಲ್ಲಿ ಮಾನ್ಸೂನ್ ಹಿಂಜರಿತವು ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ 15ರಂದಿಲೇ ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ 23ರವರೆಗೆ ವಿಳಂಬವಾಗಿದೆ, ಎಂದು ನಾಗರತ್ನ ಹೇಳಿದ್ದಾರೆ. ಅಕ್ಟೋಬರ್ ಅನ್ನು ಪರಿವರ್ತನೆಯ ಅವಧಿ ಎಂದು ಹೇಳಲಾಗುತ್ತದೆ. ಇದು ನೈರುತ್ಯ ಮಾನ್ಸೂನ್ ನಿರ್ಗಮನ ಮತ್ತು ಈಶಾನ್ಯ ಮಾನ್ಸೂನ್ ಆಗಮನದ ನಡುವಿನ ಅವಧಿ. ಆದರೆ, ಈಗ ನೈರುತ್ಯ ಮಾನ್ಸೂನ್ ನಿರ್ಗಮನ ವಿಳಂಬವಾಗಿರುವುದರಿಂದ, ಇನ್ನೂ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆಯಂತೆ. ಅಕ್ಟೋಬರ್ 18 ಮತ್ತು 19 ರಂದು ಹೈದರಾಬಾದ್‌ನಲ್ಲಿ ಮಳೆಯಾಗಲು ಸಹ ಇದೇ ಕಾರಣ. ಇದರ ಪರಿಣಾಮ ದಕ್ಷಿಣ ತೆಲಂಗಾಣದಲ್ಲಿ ಅಕ್ಟೋಬರ್ 23 ರವರೆಗೆ ಮಳೆ ಇರುತ್ತದೆ. ಉತ್ತರಾಖಂಡ ಪ್ರವಾಹಕ್ಕೆ ಕಾರಣಗಳೇನು? ಮತ್ತೊಂದೆಡೆ ಮಾನ್ಸೂನ್ ಮಾರುತಗಳು ಈಗಾಗಲೇ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ನಿರ್ಗಮಿಸಿವೆ. ಆದಾಗ್ಯೂ, ಉತ್ತರಾಖಂಡದಲ್ಲಿ ಪ್ರವಾಹ ವಿನಾಶಕಾರಿಯಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡವನ್ನು ಬಿಟ್ಟಿರುವುದು ನಿಜ. ಆದಾಗ್ಯೂ, ನೈರುತ್ಯ ಮಾನ್ಸೂನ್ ನಿರ್ಗಮನದ ನಂತರ, ವಾಯುವ್ಯದಿಂದ ಬಲವಾದ ಗಾಳಿ ಇಲ್ಲಿ ಬೀಸಲಾರಂಭಿಸುತ್ತಿದೆ. ಈ ಕಾರಣದಿಂದಾಗಿ, ಹವಾಮಾನವು ಉತ್ತರ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಅಲ್ಲಿ ಭಾರಿ ಮಳೆ ಮತ್ತು ಹಿಮ ಬೀಳುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಪಶ್ಚಿಮದ ಅಡಚಣೆಗಳಿಂದಾಗಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಿದೆ. ನೈನಿತಾಲ್, ಚಂಪಾವತ್ ಮತ್ತು ಪಂಚೇಶ್ವರದಂತಹ ಸ್ಥಳಗಳಲ್ಲಿ, 500 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇದು ಉತ್ತರಾಖಂಡ್ ಪ್ರವಾಹಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಪೂರ್ವ ದಿಕ್ಕಿಗೆ ಚಲಿಸುತ್ತದೆಯಂತೆ. ನಂತರ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮುಂಗಾರು ತಿರುಗಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದಿಂದಾಗಿ ದೆಹಲಿ ಹಾಗೂ ಉತ್ತರ ಮತ್ತು ಮಧ್ಯ ಭಾರತದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಬೆಂಗಳೂರು: ಕೇರಳ ಹಾಗೂ ಉತ್ತರಾಖಂಡದಲ್ಲಿ ರಣ ಮಳೆ ಸುರಿಯುತ್ತಿದೆ. ಕರ್ನಾಟಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಸಹ ಮಳೆಯಾರ್ಭಟ ಜೋರಾಗಿದೆ. ಕೇರಳದಲ್ಲಿ ಸರಿಸುಮಾರು 26 ಸ್ಥಳಗಳಲ್ಲಿ ಪ್ರವಾಹದ ಅಪಾಯವಿದೆ ಎಂದು ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 50ಕ್ಕೆ ಸಮೀಪಿಸುತ್ತಿದೆ.
ಅಕ್ಟೋಬರ್ 18ರಿಂದ ಹೈದರಾಬಾದ್‌ನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 1960ರಿಂದ ಇದುವರೆಗೆ ಅತಿ ಹೆಚ್ಚು ಮಳೆ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. 1960ರಲ್ಲಿ ಒಟ್ಟು 93.4 ಮಿಮೀ ಮಳೆ ದಾಖಲಾಗಿತ್ತು, ಇದೇ ತಿಂಗಳ 20ರಂದು 94.6 ಮಿಮೀ ಮಳೆ ದಾಖಲಾಗಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಅಕ್ಟೋಬರ್‌ನಲ್ಲಿ ಕಡಿಮೆಯಾಗುತ್ತೆ. ಆದರೆ,ಸದ್ಯ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದಕ್ಕೆ ಕಾರಣವೇನು?
ದೇಶದ ವಿವಿಧ ಭಾಗಗಳಲ್ಲಿನ ಭಾರೀ ಮಳೆಗೆ ಮೂರು ಮುಖ್ಯ ಕಾರಣಗಳಿವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಮೊದಲನೆಯದು ಕಡಿಮೆ ಒತ್ತಡ, ಎರಡನೆಯದು ಮಾನ್ಸೂನ್ ಹಿಂಪಡೆಯುವಿಕೆಯ ವಿಳಂಬ, ಮತ್ತು ಮೂರನೆಯದು ವಾಯುವ್ಯದಿಂದ ಬೀಸುತ್ತಿರುವ ಬಲವಾದ ಗಾಳಿ. ಈ ಮೂರು ಬೆಳವಣಿಗೆಗಳು ಪ್ರತಿ ಪ್ರದೇಶದ ಮೇಲೆ ವಿಶಿಷ್ಟ ಪರಿಣಾಮವನ್ನು ಬೀರುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೂನ್ ಮೊದಲ ವಾರದಲ್ಲಿ ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಸತತ ಮೂರು ದಿನಗಳವರೆಗೆ 5 ಮಿ.ಮೀ. ಶೇ.60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಡಿಮೆ ಮಳೆಯಾಗಿದೆ. ಮುಂಗಾರು ಮಾರುತವು ಕೇರಳ ಮತ್ತು ದಕ್ಷಿಣ ಕರ್ನಾಟಕದ ಮೂಲಕ ಹಾದು ಜುಲೈ ಎರಡನೇ ವಾರದಲ್ಲಿ ರಾಜಸ್ಥಾನದ ಬಿಕನೇರ್ ತಲುಪುತ್ತದೆ. ಇದರೊಂದಿಗೆ, ಮುಂಗಾರು ಭಾರತದಾದ್ಯಂತ ಹರಡಿದೆ ಎಂದು ಐಎಂಡಿ ಅಂದು ಘೋಷಿಸಿತ್ತು.
ಮುಂಗಾರು ಮಾರುತಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ನಿಧಾನಗತಿಯಲ್ಲಿ ಸಾಗುತ್ತವೆ. ಸತತವಾಗಿ ಐದು ದಿನಗಳ ಕಾಲ ಮಳೆ ಇರುವುದಿಲ್ಲ. ಈ ಸಮಯದಲ್ಲಿ ಮಾರುತಗಳು ದಿಕ್ಕನ್ನು ಬದಲಾಯಿಸಿದರೆ ಹಿಂಗಾರು ಆರಂಭವಾಗುತ್ತದೆ ಎಂದು ಐಎಂಡಿ ಪ್ರಕಟಿಸಿತ್ತು.ಆದರೆ, ಹೈದರಾಬಾದಿನ ಹವಾಮಾನ ಇಲಾಖೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ನಾಗರತ್ನರವರ ಪ್ರಕಾರ, ಮಾರುತಗಳು ದಿಕ್ಕನ್ನು ಬದಲಾಯಿಸಲು ವಿಳಂಬ ಮಾಡಿದರ ಪರಿಣಾಮ ಹಿಂಗಾರು ಮಳೆ ಪ್ರಾರಂಭವಾಗಲು ನಿಧಾನವಾಗಿದೆ. ಮಾರುತಗಳ ಹಿಂಜರಿತದ ವಿಳಂಬದಿಂದಾಗಿ ತೆಲಂಗಾಣ ಮತ್ತು ಉತ್ತರ ಭಾರತದಲ್ಲಿ ಇನ್ನೂ ಮಳೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

18/10/2021: 19:45 IST; Light intensity intermittent rain/drizzle would occur over and adjoining areas of Nazibabad, Amroha, Moradabad, Sambhal, Bareilly, Narora, Sahaswan, Atrauli, Badayun, Ganjdundwara, Firozabad, Shikohabad (U.P.) during next 2 hours. pic.twitter.com/ieYbcsaA0H
— India Meteorological Department (@Indiametdept) October 18, 2021

18/10/2021: 19:45 IST; Light intensity intermittent rain/drizzle would occur over and adjoining areas of Nazibabad, Amroha, Moradabad, Sambhal, Bareilly, Narora, Sahaswan, Atrauli, Badayun, Ganjdundwara, Firozabad, Shikohabad (U.P.) during next 2 hours. pic.twitter.com/ieYbcsaA0H
— India Meteorological Department (@Indiametdept) October 18, 2021

ಅಕ್ಟೋಬರ್ ಪರಿವರ್ತನೆಯ ಅವಧಿ
ತೆಲಂಗಾಣದಲ್ಲಿ ಮಾನ್ಸೂನ್ ಹಿಂಜರಿತವು ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ 15ರಂದಿಲೇ ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ 23ರವರೆಗೆ ವಿಳಂಬವಾಗಿದೆ, ಎಂದು ನಾಗರತ್ನ ಹೇಳಿದ್ದಾರೆ.
ಅಕ್ಟೋಬರ್ ಅನ್ನು ಪರಿವರ್ತನೆಯ ಅವಧಿ ಎಂದು ಹೇಳಲಾಗುತ್ತದೆ. ಇದು ನೈರುತ್ಯ ಮಾನ್ಸೂನ್ ನಿರ್ಗಮನ ಮತ್ತು ಈಶಾನ್ಯ ಮಾನ್ಸೂನ್ ಆಗಮನದ ನಡುವಿನ ಅವಧಿ. ಆದರೆ, ಈಗ ನೈರುತ್ಯ ಮಾನ್ಸೂನ್ ನಿರ್ಗಮನ ವಿಳಂಬವಾಗಿರುವುದರಿಂದ, ಇನ್ನೂ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆಯಂತೆ. ಅಕ್ಟೋಬರ್ 18 ಮತ್ತು 19 ರಂದು ಹೈದರಾಬಾದ್‌ನಲ್ಲಿ ಮಳೆಯಾಗಲು ಸಹ ಇದೇ ಕಾರಣ. ಇದರ ಪರಿಣಾಮ ದಕ್ಷಿಣ ತೆಲಂಗಾಣದಲ್ಲಿ ಅಕ್ಟೋಬರ್ 23 ರವರೆಗೆ ಮಳೆ ಇರುತ್ತದೆ.
ಉತ್ತರಾಖಂಡ ಪ್ರವಾಹಕ್ಕೆ ಕಾರಣಗಳೇನು?
ಮತ್ತೊಂದೆಡೆ ಮಾನ್ಸೂನ್ ಮಾರುತಗಳು ಈಗಾಗಲೇ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ನಿರ್ಗಮಿಸಿವೆ. ಆದಾಗ್ಯೂ, ಉತ್ತರಾಖಂಡದಲ್ಲಿ ಪ್ರವಾಹ ವಿನಾಶಕಾರಿಯಾಗಿದೆ.
ನೈರುತ್ಯ ಮಾನ್ಸೂನ್ ಮಾರುತಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡವನ್ನು ಬಿಟ್ಟಿರುವುದು ನಿಜ. ಆದಾಗ್ಯೂ, ನೈರುತ್ಯ ಮಾನ್ಸೂನ್ ನಿರ್ಗಮನದ ನಂತರ, ವಾಯುವ್ಯದಿಂದ ಬಲವಾದ ಗಾಳಿ ಇಲ್ಲಿ ಬೀಸಲಾರಂಭಿಸುತ್ತಿದೆ. ಈ ಕಾರಣದಿಂದಾಗಿ, ಹವಾಮಾನವು ಉತ್ತರ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಅಲ್ಲಿ ಭಾರಿ ಮಳೆ ಮತ್ತು ಹಿಮ ಬೀಳುತ್ತಿದೆ.
ಅಕ್ಟೋಬರ್ 18 ಮತ್ತು 19ರಂದು ಪಶ್ಚಿಮದ ಅಡಚಣೆಗಳಿಂದಾಗಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಿದೆ. ನೈನಿತಾಲ್, ಚಂಪಾವತ್ ಮತ್ತು ಪಂಚೇಶ್ವರದಂತಹ ಸ್ಥಳಗಳಲ್ಲಿ, 500 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇದು ಉತ್ತರಾಖಂಡ್ ಪ್ರವಾಹಕ್ಕೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಪೂರ್ವ ದಿಕ್ಕಿಗೆ ಚಲಿಸುತ್ತದೆಯಂತೆ. ನಂತರ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಮುಂಗಾರು ತಿರುಗಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದಿಂದಾಗಿ ದೆಹಲಿ ಹಾಗೂ ಉತ್ತರ ಮತ್ತು ಮಧ್ಯ ಭಾರತದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.