ಬೆಂಗಳೂರು: ಕರ್ನಾಟಕ ಹೈಕೋರ್ಟ್ ವಿಶೇಷ ಪ್ರಕರಣವೊಂದಕ್ಕೆ ಗಮನ ಸೆಳೆದಿದ್ದು, ಮಹತ್ವದ ತೀರ್ಪು ನೀಡಿದೆ. ಇಸ್ಲಾಂನಲ್ಲಿ ಮದುವೆ ಒಪ್ಪಂದವಾಗಿದ್ದರೂ ಅಥವಾ ಸಂಸ್ಕಾರವಲ್ಲದಿದ್ದರೂ ಪತಿ ತನ್ನ ಮೊದಲ ಪತ್ನಿಗೆ (ತಲಾಖ್ ನೀಡಿದ ಬಳಿಕ) ಜೀವನ ನಿರ್ವಹಣೆ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠವು ವಿಚ್ಛೇದಿತ ಪತ್ನಿಗೆ ಮಾಸಿಕ ರೂ 3,000 ನಿರ್ವಹಣೆಯನ್ನು ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಝಾಜೂರ್ ರೆಹಮಾನ್ ಅವರ ಅರ್ಜಿಯನ್ನು ತಿರಸ್ಕರಿಸಿ ಕಳೆದ ಅಕ್ಟೋಬರ್ 7ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಧರ್ಮದ ವಿವಾಹವು ಒಂದು ಒಪ್ಪಂದವಾಗಿದೆ ಮತ್ತು ಎರಡು ಕುಟುಂಬಗಳ ನಡುವಿನ ಒಪ್ಪಂದದ ಪ್ರಕಾರ ದಂಪತಿಗಳು ಮದುವೆಯಾಗುತ್ತಾರೆ ಎಂದು ಪೀಠವು ಗಮನಿಸಿದ್ದು ವಿಚ್ಛೇದನದ (ತಲಾಖ್) ಸಂದರ್ಭದಲ್ಲಿ ಪತಿ ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಂತಿಲ್ಲ ಮತ್ತು ಕೇವಲ ‘ಮೆಹರ್’ (ಹಣ ಅಥವಾ ಉಡುಗೊರೆ) ನೀಡುವುದರಿಂದ ವಿಷಯ ಮುಗಿಯುವುದಿಲ್ಲ ಹಾಗೂ ಮೊದಲ ಪತ್ನಿಯ ಸಂಬಂಧಕ್ಕೆ ಕೊನೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ
ನಿಖಾಃ ಮಾಡಿಕೊಂಡ ಪುರುಷನು ತನ್ನ ಸಂಗಾತಿಯ ಮೇಲೆ ಕೆಲವು ಸಮರ್ಥನೀಯ ಜವಾಬ್ದಾರಿಗಳನ್ನು ಸೃಷ್ಟಿಸುತ್ತದೆ ಮತ್ತು ಯಾವುದೇ ಆದಾಯವಿಲ್ಲದ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಮೊದಲ ಹೆಂಡತಿಗೆ ಪರಿಹಾರದ ಅಗತ್ಯವಿದೆ ಎಂದು ನ್ಯಾಯಾಲಯ ಗಮನಿಸಿದೆ. ಈ ಗಮನಾರ್ಹ ಹೇಳಿಕೆಯು ಕೂಡ ಕುರಾನ್ ಮತ್ತು ಹದೀಸ್ (ಇಸ್ಲಾಮಿಕ್ ಸಂಪ್ರದಾಯ)ವನ್ನು ಉಲ್ಲೇಖಿಸಿದ್ದು ಮೊದಲ ಪತ್ನಿ ಮದುವೆಯಾಗಿ ಅಸಹಾಯಕಳಾದರೆ ತಲಾಖ್ ನೀಡಬಯಸುವ ಪತಿ ತಕ್ಕ ಪರಿಹಾರ ನೀಡಬೇಕಾಗುತ್ತದೆ. ಈ ಕುರಿತು ನ್ಯಾಯಪೀಠದ ವಾದದಲ್ಲಿ ಮದುವೆಯ ಸಮಯದಲ್ಲಿ ಈಗಾಗಲೇ ಮೆಹರ್(ಹಣ ಅಥವಾ ಉಡುಗೊರೆ) ನೀಡಿದ್ದೇನೆ ಎಂದು ಅರ್ಜಿ ಸಲ್ಲಿಸಿದ್ದ ಪತಿ ವಾದವು ಮೊದಲ ಹೆಂಡತಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬುವುದು ಅವನ ವಾದವಾಗಿತ್ತು ಆದರೆ ಈ ಕುರಿತು ಸಲ್ಲಿಸಿದ್ದ ಅವನ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಮೊದಲ ಪತ್ನಿಗೆ ತಲಾಖ್ ನೀಡಿ ಕೋರ್ಟ್ ಮೊರೆ ಹೊಗಿದ್ದ ರೆಹಮಾನ್ ತನ್ನ ಎರಡನೇ ಹೆಂಡತಿಯ ಹಾಗೂ ಅವರ ಮಕ್ಕಳ ಜೀವನದ ಖರ್ಚುಗಳನ್ನು ನೋಡಿಕೊಳ್ಳಬೇಕು ಎಂದು ವಾದಿಸಿದ್ದನು. ಈ ಹೇಳಿಕೆಯನ್ನು ಆಲಿಸಿದ ಕೋರ್ಟ್ ರೆಹಮಾನ್ ನೈತಿಕತೆಯ ವಿರುದ್ಧ ವಾದವನ್ನು ಹೇಳಿದ ಕೋರ್ಟ್ ಅವನಿಗೆ ರೂ. 25,000 ದಂಡವನ್ನು ವಿಧಿಸಿದ್ದು, ಈ ಹಣವನ್ನು ತಾನು ತಲಾಖ್ ನೀಡಿರುವ ಮೊದಲ ಪತ್ನಿಗೆ ನೀಡಬೇಕು ಎಂದು ಆದೇಶಿಸಿದೆ. ರೆಹಮಾನ್ 1991ರಲ್ಲಿ ಸಾಯಿರಾ ಬಾನು ಅವರನ್ನು ವಿವಾಹವಾದರು. ಒಂಬತ್ತು ತಿಂಗಳ ನಂತರ ಆತ ಆಕೆಗೆ ಮೆಹರ್ ರೂಪದಲ್ಲಿ 5,000 ರೂ. ಹಣ ನೀಡಿ ವಿಚ್ಛೇದನ(ತಲಾಖ್) ನೀಡಿದ್ದ. 2002ರಲ್ಲಿ ಸಾಯಿರಾ ಭಾನು ತನ್ನ ಮಾಜಿ ಪತಿಯಿಂದ ಪರಿಹಾರ ಕೋರಿ ಸಿವಿಲ್ ಅರ್ಜಿ ಸಲ್ಲಿಸಿದ್ದರು. ರೆಹಮಾನ್ ತನ್ನ ವಿಚ್ಛೇದಿತ ಪತ್ನಿಗೆ ಪ್ರತಿ ತಿಂಗಳು 3,000 ರೂಪಾಯಿಗಳನ್ನು ನೀಡುವಂತೆ ಕೌಟುಂಬಿಕ ನ್ಯಾಯಾಲಯವು 2011ರಲ್ಲಿ ಆದೇಶಿಸಿತ್ತು. ನಂತರ ರೆಹಮಾನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು.ಬೆಂಗಳೂರು: ಕರ್ನಾಟಕ ಹೈಕೋರ್ಟ್ ವಿಶೇಷ ಪ್ರಕರಣವೊಂದಕ್ಕೆ ಗಮನ
ಸೆಳೆದಿದ್ದು, ಮಹತ್ವದ ತೀರ್ಪು ನೀಡಿದೆ.
ಇಸ್ಲಾಂನಲ್ಲಿ ಮದುವೆ ಒಪ್ಪಂದವಾಗಿದ್ದರೂ ಅಥವಾ ಸಂಸ್ಕಾರವಲ್ಲದಿದ್ದರೂ ಪತಿ ತನ್ನ ಮೊದಲ ಪತ್ನಿಗೆ (ತಲಾಖ್ ನೀಡಿದ ಬಳಿಕ) ಜೀವನ ನಿರ್ವಹಣೆ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠವು ವಿಚ್ಛೇದಿತ ಪತ್ನಿಗೆ ಮಾಸಿಕ ರೂ 3,000 ನಿರ್ವಹಣೆಯನ್ನು ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಝಾಜೂರ್ ರೆಹಮಾನ್ ಅವರ ಅರ್ಜಿಯನ್ನು ತಿರಸ್ಕರಿಸಿ ಕಳೆದ ಅಕ್ಟೋಬರ್ 7ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಸ್ಲಿಂ ಧರ್ಮದ ವಿವಾಹವು ಒಂದು ಒಪ್ಪಂದವಾಗಿದೆ ಮತ್ತು ಎರಡು ಕುಟುಂಬಗಳ ನಡುವಿನ ಒಪ್ಪಂದದ ಪ್ರಕಾರ ದಂಪತಿಗಳು ಮದುವೆಯಾಗುತ್ತಾರೆ ಎಂದು ಪೀಠವು ಗಮನಿಸಿದ್ದು ವಿಚ್ಛೇದನದ (ತಲಾಖ್)
ಸಂದರ್ಭದಲ್ಲಿ ಪತಿ ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಂತಿಲ್ಲ ಮತ್ತು ಕೇವಲ ‘ಮೆಹರ್’ (ಹಣ ಅಥವಾ ಉಡುಗೊರೆ) ನೀಡುವುದರಿಂದ ವಿಷಯ ಮುಗಿಯುವುದಿಲ್ಲ ಹಾಗೂ ಮೊದಲ ಪತ್ನಿಯ ಸಂಬಂಧಕ್ಕೆ ಕೊನೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ
ನಿಖಾಃ ಮಾಡಿಕೊಂಡ ಪುರುಷನು ತನ್ನ
ಸಂಗಾತಿಯ ಮೇಲೆ ಕೆಲವು ಸಮರ್ಥನೀಯ ಜವಾಬ್ದಾರಿಗಳನ್ನು ಸೃಷ್ಟಿಸುತ್ತದೆ ಮತ್ತು ಯಾವುದೇ ಆದಾಯವಿಲ್ಲದ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಮೊದಲ
ಹೆಂಡತಿಗೆ ಪರಿಹಾರದ ಅಗತ್ಯವಿದೆ ಎಂದು ನ್ಯಾಯಾಲಯ ಗಮನಿಸಿದೆ.
ಈ ಗಮನಾರ್ಹ ಹೇಳಿಕೆಯು ಕೂಡ ಕುರಾನ್ ಮತ್ತು ಹದೀಸ್ (ಇಸ್ಲಾಮಿಕ್ ಸಂಪ್ರದಾಯ)ವನ್ನು ಉಲ್ಲೇಖಿಸಿದ್ದು ಮೊದಲ ಪತ್ನಿ ಮದುವೆಯಾಗಿ ಅಸಹಾಯಕಳಾದರೆ ತಲಾಖ್ ನೀಡಬಯಸುವ ಪತಿ ತಕ್ಕ ಪರಿಹಾರ ನೀಡಬೇಕಾಗುತ್ತದೆ.
ಈ ಕುರಿತು ನ್ಯಾಯಪೀಠದ ವಾದದಲ್ಲಿ ಮದುವೆಯ ಸಮಯದಲ್ಲಿ ಈಗಾಗಲೇ ಮೆಹರ್(ಹಣ ಅಥವಾ ಉಡುಗೊರೆ) ನೀಡಿದ್ದೇನೆ ಎಂದು ಅರ್ಜಿ ಸಲ್ಲಿಸಿದ್ದ ಪತಿ ವಾದವು ಮೊದಲ ಹೆಂಡತಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬುವುದು ಅವನ ವಾದವಾಗಿತ್ತು ಆದರೆ ಈ ಕುರಿತು ಸಲ್ಲಿಸಿದ್ದ ಅವನ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.
ಮೊದಲ ಪತ್ನಿಗೆ ತಲಾಖ್ ನೀಡಿ ಕೋರ್ಟ್ ಮೊರೆ ಹೊಗಿದ್ದ ರೆಹಮಾನ್ ತನ್ನ
ಎರಡನೇ ಹೆಂಡತಿಯ ಹಾಗೂ ಅವರ ಮಕ್ಕಳ ಜೀವನದ ಖರ್ಚುಗಳನ್ನು ನೋಡಿಕೊಳ್ಳಬೇಕು ಎಂದು ವಾದಿಸಿದ್ದನು. ಈ ಹೇಳಿಕೆಯನ್ನು ಆಲಿಸಿದ ಕೋರ್ಟ್ ರೆಹಮಾನ್ ನೈತಿಕತೆಯ ವಿರುದ್ಧ ವಾದವನ್ನು ಹೇಳಿದ ಕೋರ್ಟ್ ಅವನಿಗೆ ರೂ. 25,000 ದಂಡವನ್ನು ವಿಧಿಸಿದ್ದು, ಈ ಹಣವನ್ನು ತಾನು ತಲಾಖ್ ನೀಡಿರುವ ಮೊದಲ ಪತ್ನಿಗೆ ನೀಡಬೇಕು ಎಂದು ಆದೇಶಿಸಿದೆ.
ರೆಹಮಾನ್ 1991ರಲ್ಲಿ ಸಾಯಿರಾ ಬಾನು ಅವರನ್ನು ವಿವಾಹವಾದರು. ಒಂಬತ್ತು ತಿಂಗಳ ನಂತರ ಆತ ಆಕೆಗೆ ಮೆಹರ್ ರೂಪದಲ್ಲಿ 5,000 ರೂ. ಹಣ ನೀಡಿ ವಿಚ್ಛೇದನ(ತಲಾಖ್) ನೀಡಿದ್ದ.
2002ರಲ್ಲಿ ಸಾಯಿರಾ ಭಾನು ತನ್ನ ಮಾಜಿ ಪತಿಯಿಂದ ಪರಿಹಾರ ಕೋರಿ ಸಿವಿಲ್ ಅರ್ಜಿ ಸಲ್ಲಿಸಿದ್ದರು. ರೆಹಮಾನ್ ತನ್ನ ವಿಚ್ಛೇದಿತ ಪತ್ನಿಗೆ ಪ್ರತಿ ತಿಂಗಳು 3,000 ರೂಪಾಯಿಗಳನ್ನು ನೀಡುವಂತೆ ಕೌಟುಂಬಿಕ ನ್ಯಾಯಾಲಯವು 2011ರಲ್ಲಿ ಆದೇಶಿಸಿತ್ತು. ನಂತರ ರೆಹಮಾನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು.