ಕಾಬೂಲ್: ಆತ್ಮಾಹುತಿ ದಾಳಿಯಲ್ಲಿ ನೂರಾರು ಜನರನ್ನು ಕೊಂದಿರುವ ಆತ್ಮಾಹುತಿ ಬಾಂಬರ್‌ಗಳನ್ನು (Suicide Bombers) ತಾಲಿಬಾನ್ ಸಚಿವ ಶ್ಲಾಘಿಸಿದ್ದಾನೆ. ಆತ್ಮಹುತಿ ಬಾಂಬರ್‌ಗಳನ್ನು ಹುತಾತ್ಮರೆಂದು ಕೊಂಡಾಡಿದ್ದಾನೆ. ನಿನ್ನೆ ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಫ್ಘಾನ್ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿ ಆತ್ಮಾಹುತಿ ಬಾಂಬರ್‌ಗಳ ತ್ಯಾಗವನ್ನು ಶ್ಲಾಘಿಸಿದ್ದಾನೆ.
ಅಲ್ಲದೆ, ದೇಶಕ್ಕಾಗಿ ಹಾಗೂ ಧರ್ಮಕ್ಕಾಗಿ ತ್ಯಾಗ ಮಾಡಿದ ಆತ್ಮಾಹುತಿ ಬಾಂಬರ್‌ಗಳ (Suicide Bombers) 10,000 ಕುಟುಂಬಕ್ಕೆ ೧೧೨ ಡಾಲರ್ ಅಂದರೆ ಭಾರತದ ೮೦೦೦ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಕುಟುಂಬಗಳಿಗೆ ಒಂದು ಫ್ಲಾಟ್ ನೀಡುವುದಾಗಿ ಸಚಿವರು ಘೋಷಿಸಿದ್ದಾರೆ. ತಾಲಿಬಾನಿಗಳ ಈ ನಡವಳಿಕೆಗೆ ಹಲವೆಡೆ ವಿರೋಧ ವ್ಯಕ್ತಬಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನಿಗಳ ಸಭೆಯ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದು, ನಟ್ಟಿಗರು ಈ ನಡೆಯನ್ನು ವಿರೋಧಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿವೆ. ಈ ತಿಂಗಳ 8 ರಂದು ಕುಂದುಜ್ ಪ್ರಾಂತ್ಯದಲ್ಲಿ ಮತ್ತು 15 ರಂದು ಕಂದಹಾರ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.