ತಿರುವನಂತಪುರಂ, ಅಕ್ಟೋಬರ್ 20; ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ (kerala Rain) ಭಾರೀ ಮಳೆಯಾಗುತ್ತಿದೆ. ಕೊಟ್ಟಾಯಂ, ಮಲಪ್ಪುರಂ, ಅಲಪ್ಪುಳ, ಎರ್ನಾಕುಲಂ, ಇಡುಕ್ಕಿ ಮತ್ತು ಪತ್ತನಂತಿಟ್ಟ ಸೇರಿದಂತೆ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಈ ನಡುವೆ ಕೇರಳದಲ್ಲಿ ಅಕ್ಟೋಬರ್ 20 ರಿಂದ 24 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೇರಳ ಹವಾಮಾನ ಇಲಾಖೆ(Kerala Meteorological Department) ನೀಡಿದೆ. 40 ಕಿಮೀ / ಗಂ. ಗಾಳಿಯು ವೇಗದಲ್ಲಿ ಬೀಸುವ ಕಾರಣ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ. ಮುಂದಿನ 3 ಗಂಟೆಗಳಲ್ಲಿ ತಿರುವನಂತಪುರ, ಕೊಲ್ಲಂ, ಕೊಟ್ಟಾಯಂ, ಇಡುಕ್ಕಿ ಮತ್ತು ಆಲಪ್ಪುಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಶಬರಿಮಲೆ ಮೇಲೆ ನಿಷೇಧ:
ಅಕ್ಟೋಬರ್ 16 ರಿಂದ ಶಬರಿಮಲೆ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದ ವಿವಿಧೆಡೆ ಸುರಿದ ಮಳೆಯಿಂದಾಗಿ ಭಕ್ತರು ಸ್ವಾಮಿ ದರ್ಶನ ಮಾಡದಂತೆ ನಿರ್ಬಂಧಿಸಲಾಗಿದೆ. ಮುಂದಿನ ತಿಂಗಳ 21 ರವರೆಗೆ ಈ ಆದೇಶವನ್ನು ವಿಸ್ತರಿಸಲಾಗಿದೆ. ಹಾಗಾಗಿ ಕ್ಯಾಂಪ್‌ಗಳಲ್ಲಿ ಬಿಡಾರ ಹೂಡಿದ್ದ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ.
Local residents towing a KSRTC bus which got stuck in flood at Poonjar on Saturday. No loss of life.Heavy rain lashes #Kerala triggering floods and inundating several areas.#REDALERT in Pathanamthitta, Kottayam, Ernakulam, Idukki & Thrissur. 4 shutters of Malampuzha dam opened. pic.twitter.com/D1dbOtEqcV
— Raam Das (@PRamdas_TNIE) October 16, 2021