ಕೇರಳ: ಕಳೆದ ವರ್ಷ ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆ ಸಾವು ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಅದರ ಆರೋಪಿಗಳಲ್ಲಿ ಒಬ್ಬ ಅಕ್ಟೋಬರ್ 16 ರಂದು ಪಾಲಕ್ಕಾಡ್ ನ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ದೃಢಪಡಿಸಿದ್ದಾರೆ. ಮೂವತ್ತೆಂಟು ವರ್ಷದ ಎಂ ರಿಯಾಸುದ್ದೀನ್ ಅವರನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅವರು ನ್ಯಾಯಯುತವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದರು ಅದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಾವು ಪೊಲೀಸ್ ಕಸ್ಟಡಿಗೆ ನ್ಯಾಯಾಲಯಕ್ಕೆ ಹೋಗುತ್ತೇವೆ ‘ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿ ಹೇಳಿದರು.

ರಿಯಾಸುದ್ದೀನ್ ಪ್ರಕರಣದ ಎರಡನೇ ಆರೋಪಿ. ಆತನ ತಂದೆ ಅಬ್ದುಲ್ ಕರೀಂ (64) ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ ನಲ್ಲಿ 15 ವರ್ಷದ ಗರ್ಭಿಣಿ ಆನೆಗೆ ಪಟಾಕಿ ಮದ್ದು ತುಂಬಿದ ಅನಾನಸ್ ಆಹಾರ ನೀಡಿದ ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಕೆಯ ಬಾಯಿಯಲ್ಲಿ ಪಟಾಕಿ ಸಿಡಿದ ನಂತರ ಆನೆ ಸಾವನ್ನಪ್ಪಿದೆ.