ಹಲ್ದ್ವಾನಿ, ಉತ್ತರಾಖಂಡ: ಉತ್ತರಾಖಂಡದ ಗೌಲಾ ನದಿ ದ್ವೀಪದಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಮಂಗಳವಾರ ಅರಣ್ಯ ಇಲಾಖೆ ರಕ್ಷಿಸಿದೆ. ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಗೌಲಾ ನದಿಯ ನೀರಿನ ಮಟ್ಟ ಅಪಾಯ ಮಟ್ಟಕ್ಕಿಂತ ಹೆಚ್ಚಾಗಿದೆ.
ಹಲ್ದುಚೌರ್ ಮತ್ತು ಲಾಲ್ಕುವಾನ್ ನಡುವಿನ ಗೌಲಾ ನದಿಯ ದ್ವೀಪದಲ್ಲಿ ಆನೆ ಸಿಲುಕಿಕೊಂಡಿತ್ತು. ನದಿಯ ನಡುವೆ ಭೂಮಿಯ ಸುತ್ತಲೂ ಆನೆ ಸುತ್ತುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
#Uttarakhand | In a viral video, an elephant was seen stranded on a piece of land in a raging Gaula river, between Halduchaur and Lalkuan.
— Abhishek Pandey (@realabhipandey1) October 19, 2021
It was later directed towards forest by Forest Department officials.#ClimateChange #ClimateCrisis pic.twitter.com/03eED3oca3
ನದಿಯಲ್ಲಿರುವ ದ್ವೀಪದಲ್ಲಿ ಆನೆ ಸಿಲುಕಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಅರಣ್ಯ ತಂಡವನ್ನು ಸ್ಥಳಕ್ಕೆ ಕಳುಹಿಸಿ ಆನೆಯನ್ನು ರಕ್ಷಣೆ ಮಾಡಲಾಗಿದೆ. ಆನೆಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಸತತ ಮೂರನೇ ದಿನವಾದ ಮಂಗಳವಾರವೂ ಭಾರೀ ಮಳೆಯಿಂದಾಗಿ ಇಡೀ ಉತ್ತರಾಖಂಡವು ಸ್ಥಗಿತಗೊಂಡಿದೆ. ಹಲ್ದ್ವಾನಿಯ ಗೌಲಾ ನದಿಯ ಮೇಲಿನ ಸೇತುವೆಯು ಭಾಗಶಃ ಹಾನಿಗೊಳಗಾಗಿದೆ. ಚಂಪಾವತ್‌ನಲ್ಲಿರುವ ಚಾಲ್ತಿ ನದಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆಯೂ ಕೊಚ್ಚಿ ಹೋಗಿದೆ.

ಭಾರೀ ಮಳೆಯಿಂದಾಗಿ ಪ್ರವಾಹದ ಫೋಟೋಗಳು ಮತ್ತು ವಿಡಿಯೋ ರಾಜ್ಯದ ವಿವಿಧ ಭಾಗಗಳಿಂದ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಉತ್ತರಾಖಂಡದ ಭಾರಿ ಮಳೆಗೆ ಸಾವಿನ ಸಂಖ್ಯೆ ಮಂಗಳವಾರ 16ಕ್ಕೆ ಏರಿದೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಇಂದು ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ರುದ್ರಪ್ರಯಾಗ ತಲುಪಿ ನಷ್ಟದ ಮೌಲ್ಯಮಾಪನವನ್ನು ಪರಿಶೀಲಿಸಿದರು.
ಭಾರತ ಹವಾಮಾನ ಇಲಾಖೆ (ಐಎಂಡಿ) ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.