ಡ್ರಗ್ ಪ್ರಕರಣದಲ್ಲಿ ಜೈಲಿನಲ್ಲಿರುವ ಅರ್ಯನ್ ಖಾನ್‌ಗೆ ಮತ್ತೆ ನಿರಾಸೆಯಾಗಿದೆ. ಆರ್ಯನ್ ಹಾಗೂ ಇತರ ಮೂವರ ಜಾಮೀನು ಅರ್ಜಿಯನ್ನು ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯವು ( Mumbai’s Special NDPS Court ) ತಿರಸ್ಕರಿಸಿದೆ. ಹೀಗಾಗಿ ಶಾರುಖ್ ಪುತ್ರನಿಗೆ ಇನ್ನಷ್ಟು ಕಾಲ ಜೈಲೇ ಗತಿ ಎನ್ನುವಂತಾಗಿದೆ.
ಈ ಮೊದಲು ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ಶಾರುಖ್ ಖಾನ್ ( Bollywood Actor Sharukh Khan ) ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ್ದ ಮುಂಬೈನ ಎನ್‌ಡಿಪಿಎಸ್ ನ್ಯಾಯಲಯ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿದೆ. ಈ ಮೂವರನ್ನು ಆಕ್ಟೋಬರ್ ೩ ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿತ್ತು.
ಮಗನನ್ನು ಜೈಲಿನಿಂದ ಹೊರತಲು ನಟ ಶಾರುಖ್ ಖಾನ್ ಹಾಗೂ ಆರ್ಯನ್ ತಾಯಿ ಗೌರಿ ಖಾನ್ ಸತತ ಪ್ರಯತ್ನ ಪಡುತ್ತಿದ್ದಾರೆ. ಮೊದಲು ಖ್ಯಾತ ವಕೀಲ ಸತೀಶ್ ಮಾನೆಶಿಂಧೆ ಅವರು ವಕಾಲತ್ತು ವಹಿಸಿದ್ದರು. ತದನಂತರ ವಕೀಲರನ್ನು ಬದಲಾಯಿಸಿದೂ ಆರ್ಯನ್ ಹೊರ ಬರುವುದು ಕಷ್ಟಸಾಧ್ಯವಾಗಿದೆ. ಆರ್ಯನ್ ಜೈಲಿನಲ್ಲಿರುವುದರಿಂದ ನಟ ಶಾರುಖ್ ಖಾನ್ ಇಮೇಜ್‌ಗೂ ಧಕ್ಕೆಯಾಗಿದೆ. ನಟ ಶಾರುಖ್ ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿದ್ದಾರೆ. ಇದ್ರಿಂದ ಕೋಟ್ಯಾಂತರ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಆದರೆ, ಈ ಘಟನೆಯಿಂದ ಹಲವಾರು ಬ್ರ್ಯಾಂಡ್‌ಗಳು ನಟ ಶಾರುಖ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮುರಿಯಲು ಚಿಂತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.