ಈದ್ ಮಿಲಾದ್ – ಇಸ್ಲಾಮಿಕ್ ಧರ್ಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಆಚರಣೆಯಾಗಿದ್ದು, ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ ಅಲ್-ಅವ್ವಲ್‌ನಲ್ಲಿ ಆಚರಿಸಲಾಗುತ್ತದೆ. ಈದ್ ಮಿಲಾದ್ ಉನ್ ನಬಿ ಹಬ್ಬವನ್ನು ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಹಬ್ಬದ ದಿನಾಂಕವೂ ಪ್ರತಿ ವರ್ಷ ಬದಲಾಗುತ್ತದೆ. ಈ ಹಬ್ಬವನ್ನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ.

ಪ್ರವಾದಿಯವರು 570 C.E ಯಲ್ಲಿ ಸೌದಿಯ ಮಕ್ಕಾದಲ್ಲಿ ಜನಿಸಿದರು. ಇಸ್ಲಾಮಿಕ್ ಲೂನಾರ್ ಕ್ಯಾಲೆಂಡರ್ ನಲ್ಲಿ ಮೂರನೇ ತಿಂಗಳಾದ ರಬಿ ಉಲ್ ಅವ್ವಲ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಂ ಧರ್ಮದ ಪ್ರಕಾರ ಪ್ರವಾದಿ ಮಹಮ್ಮದ ಅವರು ಅಲ್ಲಾಹುವಿನ ಕೊನೆಯ ದೇವ ಮಾನವರಾಗಿದ್ದರು. ಪ್ರತಿಯೊಬ್ಬ ಮನುಷ್ಯರಲ್ಲೂ ಪ್ರೀತಿ ಮತ್ತು ಏಕತೆಯ ಸಂದೇಶ ಸಾರಿದ್ದರು.

8 ನೇ ಶತಮಾನದಲ್ಲಿ ಪ್ರವಾದಿಯವರ ಮನೆಯನ್ನು ಪ್ರಾರ್ಥನ ಮಂದಿರವಾಗಿ ಪರಿವರ್ತನೆ ಮಾಡಿದಾಗ ಇವತ್ತಿನ ಈ ದಿನ ಹೆಚ್ಚು ಪ್ರಸಿದ್ದಿಯಾಯಿತು. ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸಿದ ಮೊದಲ ಇಸ್ಲಾಂ ದೊರೆ ಮುಝಾಫರ್ ಅಲ್ ದಿನ್ ಗೋಕ್ಬೊರಿ ಎಂದು ನಂಬಲಾಗಿದೆ. ಇವತ್ತಿಗೂ ಈ ಹಬ್ಬದ ದಿನವನ್ನು ದೇಶದೇಲ್ಲೆಡೆ ಮುಸ್ಲಿಂ ಭಾಂದವರು ವಿಭಿನ್ನವಾಗಿ ಸಂಭ್ರಮದಿಂದ ಆಚರಿಸುತ್ತಾರೆ.

ಮುಸ್ಲಿಂ ಭಾಂದವರು ಈ ದಿನ ಪವಿತ್ರವಾದ ಪ್ರಾರ್ಥನೆ ಮತ್ತು ಇಸ್ಲಾಂ ಪವಿತ್ರ ಗ್ರಂಥವಾದ ಕುರಾನ್ ನ ಪಠಣಗಳನ್ನು ಮಾಡುತ್ತಾರೆ. ಈ ಹಬ್ಬದ ದಿನದಂದು ಶಿಯಾ ಮತ್ತು ಸುನ್ನಿಗಳು ವಿಶೇಷ ಮತ್ತು ವಿಭಿನ್ನ ಶೈಲಿಯಲ್ಲಿ ಕಂಡು ಬರುತ್ತಾರೆ. ಜನರು ಹಸಿರು ಬಟ್ಟೆಗಳನ್ನ ತೊಡುತ್ತಾರೆ, ಹಸಿರು ಧ್ವಜಗಳನ್ನು ಹಿಡಿದು ಸಂಭ್ರಮಿಸುತ್ತಾರೆ.
ಇದನ್ನು ಓದಿ : Explainer : ನಿಮ್ಮ ಮನೆಯ LPG ಸಿಲಿಂಡರ್‌ಗೂ ಕೂಡ ಇದೆ ಎಕ್ಸ್‌ಪೈರಿ ಡೇಟ್ – ಈಗಲೇ ಪರಿಶೀಲಿಸಿ
ಜನರು ಮೆರವಣಿಗೆಗಳು ಮತ್ತು ಪ್ರಾರ್ಥನೆ ಸಭೆಗಳನ್ನು ನಡೆಸುತ್ತಾರೆ, ಮಸೀದಿಗಳು ಮತ್ತು ಪ್ರಾರ್ಥನ ಮಂದಿರಗಳಲ್ಲಿ ವಿಶೇಷ ಊಟದ ವ್ಯವಸ್ಥೆ ಸಹ ಮಾಡಲಾಗಿರುತ್ತದೆ. ಇನ್ನೂ ಮುಸ್ಲಿಂ ಸಮುದಾಯದ ಇನ್ನಿತರ ಅನೇಕ ಪಂಗಡಗಳು ಪ್ರವಾದಿ ಮಹಮ್ಮದರವರ ಜನ್ಮ ದಿನಾಚರಣೆಗೆ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಯಾವುದೇ ಆಚರಣೆ ಇಲ್ಲವೆಂದು ನಂಬುತ್ತಾರೆ. ಸಲಫಿ ಮತ್ತು ವಾಹಬಿ ಮುಸ್ಲಿಂ ಪಂಗಡಗಳ ಭಾಂದವರು ಈ ರೀತಿಯ ಸಂಪ್ರದಾಯಗಳನ್ನು ಆಚರಿಸುವುದಿಲ್ಲ.