ಬರೇಲಿ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಬರೇಲಿಯಲ್ಲಿ ಚಿಪ್ಸ್ ಮತ್ತು ಬಿಸ್ಕೆಟ್ ತಿಂದ ಮೂವರು ಸಹೋದರಿಯರು ಸಾವನ್ನಪ್ಪಿದ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಬರೇಲಿಯ ನವೀನ್ ಕುಮಾರ್ ಸಿಂಗ್ ಅವರ ಮೂವರು ಹೆಣ್ಣು ಮಕ್ಕಳು ಪರಿ, ಪಿಹು ಮತ್ತು ವಿಧಿ ಮೃತಪಟ್ಟ ದುರ್ದೈವಿಗಳು.

ಉತ್ತರ ಪ್ರದೇಶದ ಬರೇಲಿಯ ಸ್ಥಳೀಯ ಅಂಗಡಿಯಲ್ಲಿ ಮೂವರು ಬಿಸ್ಕತ್ತು ಮತ್ತು ಚಿಪ್ಸ್ ಖರೀದಿಸಿದ್ದರು. ನಂತರ ಮೂವರು ಒಟ್ಟಿಗೆ ಕುಳಿತು ಅವುಗಳನ್ನು ತಿಂದಿದ್ದಾರೆ. ಅವುಗಳನ್ನು ತಿಂದ ಕೇವಲ 24 ಗಂಟೆಗಳಲ್ಲಿ ಮೂವರು ತೀವ್ರ ಅಸ್ವಸ್ಥರಾದರು. ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಮೂವರನ್ನು ಅವರ ತಂದೆ ನವೀನ್ ಕುಮಾರ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದರು.
ಇದನ್ನೂ ಓದಿ : SPACE – ಬಾಹ್ಯಾಕಾಶದಲ್ಲಿ ಮಾನವರು ಮೃತಪಟ್ಟರೆ ಅವರ ದೇಹ ಏನಾಗುತ್ತವೆ
ಇಬ್ಬರು ಕಿರಿಯ ಸಹೋದರಿಯರಾದ ಪಿಹು ಮತ್ತು ಪಾರಿ ಮಾರ್ಗ ಮಧ್ಯೆ ಮೃತಪಟ್ಟರೇ ಮತ್ತೊಬ್ಬ ಮಗಳು ವಿಧಿ ಚಿಕಿತ್ಸೆ ಪಡೆಯುವಾಗ ಕೊನೆಯುಸಿರೆಳೆದ್ದಿದ್ದಾಳೆ. ಭಾನುವಾರ ಮೂವರು ಮಕ್ಕಳ ಅಂತ್ಯಕ್ರಿಯೆ ನಡೆಯಿತು. ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಾಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ವಿಧಿವಿಜ್ಞಾನ ತಜ್ಞರು ಪ್ರಸ್ತುತ ಮಕ್ಕಳು ತಂದ ಆ ಚಿಪ್ಸ್ ಮತ್ತು ಬಿಸ್ಕತ್ತುಗಳನ್ನು ಪರೀಕ್ಷಿಸುತ್ತಿದ್ದಾರೆ.