ಬೆಂಗಳೂರು : ಕನ್ನಡ ಭಾಷೆ ಬಳಕೆ ಹಾಗೂ ಕನ್ನಡಾಭಿಮಾನ ಹೊಂದಿರುವ ಸದಭಿರುಚಿಯ ಧಾರಾವಾಹಿಯೆಂದೇ ಖ್ಯಾತಿಯಾಗಿರುವ ಕನ್ನಡತಿ. ಈ ಧಾರಾವಾಹಿ ಪಾತ್ರಧಾರಿಗಳು ಕೂಡ ಜನರಿಗೆ ಅಚ್ಚುಮೆಚ್ಚು. ಇದೀಗ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿಯೂ ಈ ಜೋಡಿ ಕಮಾಲ್ ಮಾಡಿದೆ. ಇಬ್ಬರಿಗೂ ‘ಅನುಬಂಧ’ ಅವಾರ್ಡ್ ಸಿಕ್ಕಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ’ ಅವಾರ್ಡ್ಸ್ ಕಾರ್ಯಕ್ರಮ ಇದೇ ಅಕ್ಟೋಬರ್ 15,16 ಮತ್ತು 17ರಂದು ಪ್ರಸಾರವಾಗಿದೆ. ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ನಾನಾ ರೀತಿಯ ಅವಾರ್ಡ್ ಸಿಕ್ಕಿದೆ. ವಾಹಿನಿಯು ಹಲವಾರು ವಿಭಾಗಗಳಲ್ಲಿ ಅವಾರ್ಡ್‌ಗಳನ್ನು ನೀಡಿದೆ. ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ಜೋಡಿ, ಜನ ಮೆಚ್ಚಿದ ಯೂತ್ ಐಕಾನ್ ಸೇರಿ ಸಾಕಷ್ಟು ಅವಾರ್ಡ್‌ಗಳನ್ನು ನೀಡಿದೆ. ಇದಕ್ಕೆ ವೀಕ್ಷಕರು ವೋಟ್ ಮಾಡಬೇಕು. ಯಾರು ಹೆಚ್ಚು ವೋಟ್ ಪಡೆಯುತ್ತಾರೋ ಅವರು ಈ ಪ್ರಶಸ್ತಿಗೆ ಭಾಜನರಾಗುತ್ತಾರೆ. ಅದೇ ರೀತಿ ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ ಪ್ರಶಸ್ತಿ ಅನುಕ್ರಮವಾಗಿ ರಂಜನಿ ರಾಘವನ್ (ಭುವಿ) ಹಾಗೂ ಕಿರಣ್ ರಾಜ್ (ಹರ್ಷ) ಗೆ ಸಿಕ್ಕಿದೆ.
ರಂಜನಿ ರಾಘವನ್ (ಭುವಿ) ಕಿರಣ್ ರಾಜ್ (ಹರ್ಷ)
ಕನ್ನಡ ಬಳಕೆ ಜೊತೆ ಕನ್ನಡತಿ ಧಾರಾವಾಹಿಯ ಕತೆ ಜನರಿಗೆ ಇಷ್ಟವಾಗಿದೆ. ಸಮಯ ತಕ್ಕಂತೆ ಬರುವ ಟ್ವಿಸ್ಟ್‌ಗಳು ಕುತೂಹಲಕಾರಿಯಾಗಿವೆ. ಹರ್ಷ (ಕಿರಣ್) ಮತ್ತು ಭುವಿ (ರಂಜನಿ) ನಡುವಿನ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ. ಭುವಿಗೆ ಪ್ರಪೋಸ್ ಮಾಡಬೇಕು ಎಂದು ಹರ್ಷ ಸಿದ್ಧತೆ ಮಾಡಿಕೊಂಡಿರುವುದು. ಭುವಿ ಹುಟ್ಟುಹಬ್ಬಕ್ಕೆ ಹರ್ಷ ಮಾಡಿದ್ದ ತಯಾರಿ ಧಾರಾವಾಹಿ ವೀಕ್ಷಕರ ಆಸಕ್ತಿ ಕೆರಳಿಸುತ್ತಿದೆ.
ಇದನ್ನೂ ಓದಿ : Guinness World Records : ಅತಿ ದೊಡ್ಡ ಮೂಗು ಹೊಂದಿರುವ ಜಗತ್ತಿನ ಜೀವಂತ ವ್ಯಕ್ತಿ – 71 ನೇ ವಯಸ್ಸಿನಲ್ಲಿಯೂ ಬೆಳೆಯುತ್ತಿರುವ ಮೂಗು
ಇನ್ನು, ತಮ್ಮ ಸಹಜ ನಟನೆಗೆ ಜನ ಮೆಚ್ಚಿದ ಜೋಡಿ ಅವಾರ್ಡ್ ಬಂದಿರುವುದಕ್ಕೆ ನಟ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಇಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.