ಇತ್ತಿಚಿನ ವರ್ಷಗಳಲ್ಲಿ ಚೀನಾದ ಸೈನ್ಯದ ಆಕ್ರಮಣವು ವಾಸ್ತವಿಕವಾಗಿ ಹೆಚ್ಚಾಗಿದೆ. ಗಡಿ ಪ್ರದೇಶ ಲಡಾಖ್ ನಿಂದ ಅರುಣಾಚಲ ಪ್ರದೇಶದವರೆಗೆ ಇವರ ಕಾರ್ಯತಂತ್ರಗಳು ವ್ಯಾಪಿಸಿದೆ. ಇದರೊಂದಿಗೆ, ಭಾರತೀಯ ಸೇನೆಯು ಅತ್ಯಂತ ಸೂಕ್ಷ್ಮವಾದ ಅರುಣಾಚಲ ಪ್ರದೇಶ ವಲಯದಲ್ಲಿ ತನ್ನ ಇತ್ತೀಚಿನ ತಂತ್ರಜ್ಞಾನವಾದ ಹೆರಾನ್ ಡ್ರೋನ್‌ಗಳ ಮೂಲಕ ಚೀನಾದ ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇತ್ತಿಚೀನ ವರದಿಯ ಪ್ರಕಾರ ಅರುಣಾಚಲ ಪ್ರದೇಶಲ್ಲಿನ ವಾಯುಯಾನ ನೆಲೆಯು ಎಎಲ್ಎಚ್ ಧ್ರುವ್ ನಂತಹ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಮೇಜರ್ ಕಾರ್ತಿಕ್ ಗರ್ಗ್ ಅವರು ಇಸ್ರೇಲ್‌ನಲ್ಲಿ ತಯಾರಿಸಿದ ಅತ್ಯಾಧುನಿಕ ಹೆರಾನ್ ಡ್ರೋನ್‌ಗಳು ಕಣ್ಗಾವಲಿನ ದೃಷ್ಟಿಯಿಂದ ಅವರಿಗೆ ತುಂಬಾ ಉಪಯುಕ್ತವಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : DRDO Campus : ಭಾರತಕ್ಕೆ ಹೊಸ 7 ಹೊಸ ರಕ್ಷಣಾ ಕಂಪನಿಗಳು – ಪ್ರಧಾನಿಗಳಿಂದ ಲೋಕಾರ್ಪಣೆ

ಕಣ್ಗಾವಲಿನ ಸಂಪನ್ಮೂಲ ಅಂತ ಬಂದಾಗ ಹೆರಾನ್ ಡ್ರೋನ್ ಒಂದು ಅತ್ಯುತ್ತಮ ವಿಮಾನವಾಗಿದೆ. ಇದನ್ನು ಮೊದಲ ಬಾರಿ ಬಳಸಿದಾಗಿನಿಂದ ಹಿಡಿದು ಇಲ್ಲಿವರೆಗೂ ಭಾರತೀಯ ಸೇನೆಯ ಕಣ್ಗಾವಲು ವ್ಯವಸ್ಥೆಯ ಬೆನ್ನೆಲುಬಾಗಿದೆ. 30,000 ಅಡಿಗಳವರೆಗೆ ಹಾರುವ ಇದು ಕಾಲಕಾಲಕ್ಕೆ ಗ್ರೌಂಡ್ ಕಮಾಂಡರ್ ಗಳಿಗೆ ಮಾಹಿತಿಯನ್ನು ತಲುಪಿಸುತ್ತದೆ. ಅದಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಬಾರತೀಯ ಸೇನೆ ಗಮನ ಹರಿಸುತ್ತದೆ.
ಇದನ್ನೂ ಓದಿ : GLOBAL HUNGER INDEX 2021 – ಏನಿದು ಜಿಎಚ್‌ಐ 2021? ಪಾಕ್, ಬಾಂಗ್ಲಾ, ನೇಪಾಳ ಹಾಗೂ ಶ್ರೀಲಂಕಾಗಿಂತಲೂ ಹಿಂದುಳಿಯಿತು ಭಾರತ

ಇದು ಏಕಕಾಲದಲ್ಲಿ 24 ರಿಂದ 30 ಗಂಟೆಗಳವರೆಗೆ ಹಾರಬಲ್ಲದು ಎಂದು ಮೇಜರ್ ಕಾರ್ತಿಕ್ ಹೇಳಿದ್ದಾರೆ. ಪ್ರಸ್ತುತ, ಭಾರತ ಮತ್ತು ಚೀನಾ ಅರುಣಾಚಲ ಪ್ರದೇಶದಂತಹ ಸೂಕ್ಷ್ಮ ವಲಯಗಳಲ್ಲಿ 50,000 ರಿಂದ 60,000 ಸೈನಿಕರನ್ನು ನಿಯೋಜಿಸಿವೆ.