ನವದೆಹಲಿ : ದೇಶದ ವಿವಿಧ ಭಾಗಗಳಲ್ಲಿ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣವನ್ನು ವಿರೋಧಿಸಿ `ರೈಲು ರೋಕೋ ಆಂದೋಲನ’ವನ್ನು ಆಯೋಜಿಸಲಾಗಿದ್ದರಿಂದ ಸುಮಾರು 50 ಕ್ಕೂ ಹೆಚ್ಚು ರೈಲುಗಳ ಮೇಲೆ ಪರಿಣಾಮ ಬೀರಿದೆ ಎಂದು ಉತ್ತರ ರೈಲ್ವೇ ಸೋಮವಾರ (ಅಕ್ಟೋಬರ್ 18) ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಉತ್ತರ ರೈಲ್ವೇ ಅಧಿಕಾರಿಯೊಬ್ಬರು, “ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಮಾಡಿದ ರೈಲು ರೋಕೋ ಆಂದೋಲನದಿಂದಾಗಿ ಸುಮಾರು 50 ಕ್ಕೂ ಹೆಚ್ಚು ರೈಲುಗಳು ಹಾಗೂ 130 ಸ್ಟೇಷನ್ ಗಳಲ್ಲಿ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಿದೆ” ಎಂದರು