ಹೈದರಾಬಾದ್ : ಜನಗಾಂವ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.

ಛತ್ತೀಸ್‌ಗಡದಿಂದ ಹೈದರಾಬಾದ್‌ಗೆ ಬರುತ್ತಿದ್ದ ಖಾಸಗಿ ಬಸ್ ಜನಗಾಂವ್ ಜಿಲ್ಲೆಯ ಲಿಂಗಲಘನಪುರ ವಲಯದ ನೆಲ್ಲುಟ್ಲದಲ್ಲಿ ಬೆಂಕಿಗಾಹುತಿಯಾಗಿದೆ. ಬಸ್‌ನಲ್ಲಿ ಬೆಂಕಿಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಚಾಲಕ ಪ್ರಯಾಣಿಕರನ್ನು ರಕ್ಷಿಸಿದ್ದಾನೆ. ಕೃಷ್ಣ ಟ್ರಾವೆಲ್ಸ್ನ ಬಸ್ ಛತ್ತೀಸ್‌ಗಡದ ಜಗದೇವಪುರದಿಂದ ಭಾನುವಾರ ರಾತ್ರಿ 26 ಪ್ರಯಾಣಿಕರೊಂದಿಗೆ ಹೈದರಾಬಾದ್‌ಗೆ ಹೊರಟಿತ್ತು. ಬಸ್ ನೆಲ್ಲುಟ್ಲ ಸಮೀಪಿಸುತ್ತಿದ್ದಂತೆ ಬಸ್ಸಿನಿಂದ ಹೊಗೆ ಆವರಿಸಿದೆ.
ಇದನ್ನೂ ಓದಿ : Shankar Rao : ‘ಪಾಪ ಪಾಂಡು’ ಖ್ಯಾತಿಯ ಶಂಕರ್ ರಾವ್ ನಿಧನ – ಚಂದನವನ ಸಂತಾಪ
ಬಸ್‌ನಲ್ಲಿ ಹೊಗೆ ಆವರಿಸುತ್ತಿದ್ದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರು ತಕ್ಷಣ ಇಳಿಯುವಂತೆ ಎಚ್ಚರಿಕೆ ನೀಡಿದ್ದಾನೆ. ಅವರೆಲ್ಲರೂ ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ ಸಂಪೂರ್ಣ ಬಸ್ ಬೆಂಕಿಗಾಹುತಿಯಾಗಿದೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಇಂಜಿನ್‌ನಲ್ಲಿನ ತೊಂದರೆಯಿಂದಾ ಈ ಬೆಂಕಿ ಅವಗಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.