ದೆಹಲಿ : ವಿಜಯ ದಶಮಿ ಹಬ್ಬದ ದಿನದಂದು ಕೂಡ ದೇಶದ ನಾಗರೀಕರಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟದೇ ಇರಲಿಲ್ಲ, ಸತತ ಎರಡನೇಯ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಈಗಾಗಲೇ ಅಡುಗೆಗೆ ಬಳಸುವ ತೈಲ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಿಂದ ಸ್ವಲ್ಪವಾದರೂ ಮುಕ್ತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ದೇಶದಾದ್ಯಂತ ಜನರು ನಿರಾಶೆಗೊಂಡರು.

ಶುಕ್ರವಾರ ಒಂದು ಲೀಟರ್ ಪೆಟ್ರೋಲ್ 35 ಪೈಸೆ ಮತ್ತು ಡೀಸೆಲ್ 36 ಪೈಸೆ ಏರಿಕೆಯಾಗಿದೆ. ಈ ಏರಿಕೆಯೊಂದಿಗೆ, ಒಂದು ಲೀಟರ್ ಪೆಟ್ರೋಲ್ ದೆಹಲಿಯಲ್ಲಿ 105.14 ರೂ. ಮತ್ತು ಮುಂಬೈನಲ್ಲಿ 111.09 ರೂ. ಒಂದು ಲೀಟರ್ ಡೀಸೆಲ್ ಬೆಲೆ ಮುಂಬೈನಲ್ಲಿ ರೂ 101.78 ಮತ್ತು ದೆಹಲಿಯಲ್ಲಿ ರೂ 93.87 ಕ್ಕೆ ತಲುಪಿದೆ. ಇದರೊಂದಿಗೆ ಕರ್ನಾಟಕದಲ್ಲಿ ಬಹುತೇಕ ಡಿಸೇಲ್ ಬೆಲೆ ಶತಕ ಬಾರಿಸಲು ಇನ್ನು ಕೆಲವೇ ಪೈಸೆಗಳ ಹೊಸ್ತಿಲಲ್ಲಿ ಬಂದು ನಿಂತಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 108.80 ರೂ ಆಗಿದ್ದರೆ. ಡಿಸೇಲ್ ಬೆಲೆ ಪ್ರತಿ ಲೀಟರ್‌ಗೆ 99.63 ರೂ ಗೆ ತಲುಪಿದೆ.
ಇದನ್ನೂ ಓದಿ : Explainer : ನಿಮ್ಮ ಮನೆಯ LPG ಸಿಲಿಂಡರ್‌ಗೂ ಕೂಡ ಇದೆ ಎಕ್ಸ್‌ಪೈರಿ ಡೇಟ್ – ಈಗಲೇ ಪರಿಶೀಲಿಸಿ

ಮತ್ತೊಂದೆಡೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 84.64 ಡಾಲರ್ ತಲುಪಿದೆ. ಕಳೆದ ಏಳು ವರ್ಷಗಳಲ್ಲಿ ಈ ಮಟ್ಟವನ್ನು ತಲುಪಿದ್ದು ಇದೇ ಮೊದಲು. ದೇಶದಾದ್ಯಂತ ಪೆಟ್ರೋಲ್ ಬೆಲೆ 110 ರೂ.ಗಳತ್ತ ಸಾಗುತ್ತಿದೆ. ಡೀಸೆಲ್ ಬೆಲೆಗಳು ಈಗಾಗಲೇ 100 ರೂ.ಗಳ ಗಡಿ ದಾಟಿದೆ.