ಇಟಾಲಿಯನ್ ಸೂಪರ್ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಲ್ಯಾಂಬೊರ್ಗಿನಿ ಭಾರತದಲ್ಲಿ ಹೊಸ ಸಾಧನೆಯೊಂದನ್ನ ಮಾಡಿದೆ. ವಿಶ್ವದ ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ಉಮ್ಲಿಂಗ್ ಲಾ ಪಾಸ್ ರಸ್ತೆಯಲ್ಲಿ ಚಲಿಸಿದ ಪ್ರಸಿದ್ಧ ಲಂಬೋರ್ಗಿನಿ ಎಸ್ ಯುವಿ ಉರುಸ್ ಕಾರು ಭಾರತದಲ್ಲಿ ಮೈಲುಗಲ್ಲನ್ನ ಸೃಷ್ಟಿಸಿತು ಎಂದು ಕಂಪನಿ ಹೇಳಿದೆ. ಲ್ಯಾಂಬೊರ್ಗಿನಿ ಬುಧವಾರ ತನ್ನ ಜನಪ್ರಿಯ ಎಸ್‌ಯುವಿ ಉರುಸ್ ಲಡಾಖ್ ಪ್ರದೇಶದ ಉಮ್ಲಿಂಗ್ ಲಾ ಪಾಸ್‌ನ ಮೇಲ್ಭಾಗದಲ್ಲಿ ಅಂದರೆ ವಿಶ್ವದ ಅತಿ ಎತ್ತರದ ಡ್ರೈವ್ ಮಾಡಬಹುದಾದ ರಸ್ತೆಯನ್ನು ಏರುವ ಮೂಲಕ ಭಾರತದಲ್ಲಿ ಈ ಸಾಧನೆ ಮಾಡಿದೆ.

ಇಲ್ಲಿ ಕಾರನ್ನು ಚಲಾಯಿಸುವುದು ಸ್ವಲ್ಪ ಕಷ್ಟವೇ ಸರಿ…! – ಉಮ್ಲಿಂಗ್ ಲಾ ಪಾಸ್ ಭಾರತದ ಲಡಾಖ್‌ನಲ್ಲಿರುವ ಒಂದು ಪರ್ವತ ಮಾರ್ಗವಾಗಿದೆ. ಈ ಮಾರ್ಗವು ಸಮುದ್ರ ಮಟ್ಟದಿಂದ 19,300 ಅಡಿ ಎತ್ತರದಲ್ಲಿದೆ. ಕಡಿಮೆ ಆಮ್ಲಜನಕದ ಕಾರಣದಿಂದ ಇಲ್ಲಿ ಕಾರನ್ನು ಚಲಾಯಿಸಲು ಸ್ವಲ್ಪ ಕಷ್ಟಕರವಾಗಿರುತ್ತದೆ.
ಇದನ್ನೂ ಓದಿ : Anand Mahindra : ನಮ್ಮ ದಿನನಿತ್ಯದ ಹ್ಯಾಬಿಟ್‌ಗಳಿಗೆ ಅಡಿಕ್ಟ್ ಆಗಿರುವ ಕುರಿತಾದ ಟ್ವೀಟ್ ಮಾಡಿದ ಆನಂದ್ ಮಹಿಂದ್ರಾ
ಕಂಪನಿಯು ಈ ಮಾರ್ಗದಲ್ಲಿ 86 ಕಿಲೋಮೀಟರ್ ಪ್ರಯಾಣಿಸಿ ನೋಡುಗರ ಹುಬ್ಬೆರುವಂತಹ ಸಾಧನೆ ಮಾಡಿದೆ. ಲ್ಯಾಂಬೊರ್ಗಿನಿ ವಿಶ್ವದ ಅತ್ಯಂತ ಕಷ್ಟಕರ ರಸ್ತೆಯಲ್ಲಿ ಚಲಿಸುತ್ತಿರುವಾಗ ನಮಗೆ ನಿಜಕ್ಕೂ ಹೆಮ್ಮೆಯ ಕ್ಷಣ ಎಂದು ಲ್ಯಾಂಬೊರ್ಗಿನಿ ಇಂಡಿಯಾ ಮುಖ್ಯಸ್ಥ ಶ್ರೀ ಶರದ್ ಅಗರ್ವಾಲ್ ಹೇಳಿದರು.

ಉಮ್ಲಿಂಗ್ ಲಾ ಪಾಸ್ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಹೊಂದಿದ್ದು, ಕನಿಷ್ಠ ತಾಪಮಾನವು -20 ಡಿಗ್ರಿಗಳಿಂದ -10 ಡಿಗ್ರಿಗಳವರೆಗೆ ಇರುತ್ತದೆ ಜೊತೆಗೆ ಅತ್ಯಂತ ತೆಳುವಾದ ಗಾಳಿಯ ಸಾಂದ್ರತೆ ಇರುವುದರ ಜೊತೆಗೆ ಗಾಳಿಯ ವೇಗ 40-80 ಕಿಮೀ/ಗಂ ವರೆಗೆ ಹೋಗುತ್ತದೆ, ಇದು ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ರಸ್ತೆಗಳಲ್ಲಿ ಒಂದಾಗಿದೆ. ಈ ರಸ್ತೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಿರ್ಮಿಸಿದೆ.