ಬೆಂಗಳೂರು : ವಿಜಯದಶಮಿ ಹಬ್ಬದ ಹಿನ್ನಲೆಯಲ್ಲಿ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರು ಬೇಟಿ ಮಾಡಿದರು ಶುಭಾಶಯಗಳನ್ನ ತಿಳಿಸಿದರು. ಇದೇ ವೇಳೆ ಉಪ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದರು.

ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ವಿಜಯದಶಮಿ ಹಬ್ಬದ ಶುಭ ಕೋರಿದ ಬಳಿಕ ಹಾನಗಲ್, ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವಿಚಾರವಾಗಿ ಚರ್ಚೆ ನಡೆಸಿದರು. ಬಿ.ಎಸ್. ಯಡಿಯೂರಪ್ಪ ಅಕ್ಟೋಬರ್ 20ರ ಬಳಿಕ ಉಪಚುನಾವಣಾ ಅಖಾಡದಲ್ಲಿ ಸ್ವತಃ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Viral Video : ಡಿ. ಕೆ. ಶಿವಕುಮಾರ್ ಅವರು 10%-12% ಲಂಚ ತೆಗೆದುಕೊಳ್ಳುತ್ತಾರೆ – ಸಲೀಂ ಅಹ್ಮದ್

ಯಡಿಯೂರಪ್ಪರವರ ಬೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ಬಿ. ಎಸ್ ಯಡಿಯೂರಪ್ಪರವರನ್ನು ಬೇಟಿ ಮಾಡಿ ಹಬ್ಬದ ಕುರಿತು ಶುಭಾಷಯ ತಿಳಿಸಿ ಆಶಿರ್ವಾದ ಪಡೆದಿದ್ದು, ಉಪ ಚುನಾವಣೆ ವಿಚಾರವಾಗಿಯೂ ಸಹ ಚರ್ಚೆ ನಡೆಸಿದ್ದೆನೆ. ಎಂದು ಮಾಹಿತಿ ನೀಡಿದರು. ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರು ಭಾಗವಹಿಸುತ್ತಿದ್ದಾರೆ.