ಬೆಂಗಳೂರು : ಈ ಸಲ ಕಪ್ ನಮ್ದೇ ಎಂಬ ಭರವಸೆಯಿಂದಲೇ ಅಪಾರ ಐಪಿಎಲ್ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವು ಡಬ್ಬಲ್ ಉತ್ಸಾಹದಿಂದ ಪ್ಲೇ ಆಫ್ ಪ್ರವೇಶಿಸಿತು, ಆದರೆ ನಿರಾಶೆಯಿಂದ ಕಪ್ ಗೆಲ್ಲುವ ಕನಸನ್ನು ನನಸು ಮಾಡದೇ ಹಿಂದೆ ಉಳಿಯುತ್ತದೆ. ಈ ಐಪಿಎಲ್ ಸೀಜನ್ ನಲ್ಲಿ ಕೂಡ ಸಮೀಸ್ ಗೆದ್ದು ಫೈನಲ್‌ಗೆ ಪ್ರವೇಶಿಸಬಹುದೆಂದು ಎಲ್ಲರು ಭಾವಿಸದ್ದರು ಏಕೆಂದರೆ ಐದು ಬಾರಿ ಐಪಿಎಲ್ ಚಾಂಪಿಯನ್ ಟೈಟಲ್ ಗಳಿಸಿದ್ದ ತಂಡ ಮುಂಬೈ ಇಂಡಿಯನ್ಸ್ ಕೂಡ ಪ್ಲೇ ಆಪ್ ಪ್ರವೇಶಿಸದೇ ಹೊರ ನಡೆಯಿತು ಹಾಗೂ ಇತರೆ ಬಲಿಷ್ಠ ತಂಡಗಳೂ ಪ್ಲೇಆಫ್ ಪ್ರವೇಶಿಸದೇ ಮನೆ ನಡೆದವು.

ಈ ಐಪಿಎಲ್ 2021ರಲ್ಲಿ ಆರ್‌ಸಿಬಿ ತುಂಬಾ ಚೆನ್ನಾಗಿ ಆಡಿದ್ದು, ಪ್ಲೇಆಫ್‌ಗೆ ತಲುಪಿತ್ತು. ಇದರೊಂದಿಗೆ ಆರ್‌ಸಿಬಿ ಶೀಘ್ರದಲ್ಲೇ ಮೊದಲ ಕಪ್ ಗೆಲ್ಲುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ತಂಡಕ್ಕೆ ಮೊತ್ತಮ್ಮೆ ದುರಾದೃಷ್ಟವು ಬೆನ್ನಟ್ಟಿದ ಪರಿಣಾಮ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಹಿಮ್ಮೆಟ್ಟಬೇಕಾಯಿತು. ಆದರೆ ಈ ಐಪಿಎಲ್ ಪಂದ್ಯ ತುಂಬಾ ಮಹತ್ವದ್ದು ಎಂದೆನಿಸಿದ್ದು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುತ್ತಿರುವ ವಿಷಯವನ್ನು ಕೊಹ್ಲಿ ಈಗಾಗಲೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Sourav Ganguly : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗಂಗೂಲಿ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಕೋಕಾ ಕೋಲಾ
ಹೌದು ಕೊಹ್ಲಿ ಇತ್ತೀಚಿಗೆ ತನ್ನ ನಿರ್ಧಾರದ ಕಾರಣವನ್ನು ಹೊರಹಾಕಿಕೊಂಡಿದ್ದಾರೆ, ಆರ್‌ಸಿಬಿ ನಾಯಕನಿಂದ ಇಂದಿನವರೆಗೂ ನಾನು ಆಟಗಾರನಾಗಿ ತಂಡಕ್ಕೆ ನೂರಕ್ಕೆ ನೂರು ಪ್ರತಿಶತ ಶಕ್ತಿಯನ್ನು ನೀಡಲು ಸಾಧ್ಯವಾಗಲಿಲ್ಲ, ನಾನು 80 ಪ್ರತಿಶತ ಕೆಲಸ ಮಾಡಲು ಬಯಸುವುದಿಲ್ಲ. ಹಾಗೆಯೇ ನಾಯಕತ್ವದ ಹೊರೆಯಿಂದಾಗಿ ನನ್ನ ತಂಡಕ್ಕೆ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ನಾಯಕನಾಗುವ ಮುನ್ನ ನಾನು ಆಟಗಾರನಾಗಿದ್ದೆ, ನನ್ನ ಮೊದಲ ಸಂಪೂರ್ಣ ಸಪೋರ್ಟ್ ನಾಯಕನಿಗಿಂತ ಹೆಚ್ಚಾಗಿ ಆಟಗಾರನಿಗೆ. ನಾನು ಸಾಧ್ಯವಾದಷ್ಟು ಉತ್ತಮ ಸ್ಥಿತಿಯಲ್ಲಿರಲು ಬಯಸುತ್ತೇನೆ. ಆಗ ಮಾತ್ರ ನಾನು ನನ್ನ ತಂಡವನ್ನು ಬೆಂಬಲಿಸಬಹುದು ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿಯ ಅವರ ಸಹ ಆಟಗಾರ, ಸ್ನೇಹಿತ ಎಬಿ ಡೆವಿಲಿಯರ್ಸ್ ಹೇಳುವಂತೆ, ಕೊಹ್ಲಿಯವರ ಈ ನಿರ್ಧಾರ ಸ್ವಾರ್ಥ ನಿರ್ಧಾರವಲ್ಲ ಎಂದು ಹೇಳಿದರು. ಏಕೆಂದರೆ ತಂಡಕ್ಕಾಗಿ ನೀವು ನಿಜವಾಗಿಯೂ ಏನು ಮಾಡಲು ಬಯಸುತ್ತೀರೋ ಅದನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಅವರು ಹೇಳಿದರು. ವಿರಾಟ್ ಅವರು ಆರ್‌ಸಿಬಿಯ ನಾಯಕನಾಗಿದ್ದಾಗ ಅನೇಕ ಯುವಕರನ್ನು ಪ್ರೋತ್ಸಾಹಿಸಿದರು ಮತ್ತು ತಂಡಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ಹೇಳಿದ್ದರು.
ಇದನ್ನೂ ಓದಿ : Anand Mahindra : ನಮ್ಮ ದಿನನಿತ್ಯದ ಹ್ಯಾಬಿಟ್‌ಗಳಿಗೆ ಅಡಿಕ್ಟ್ ಆಗಿರುವ ಕುರಿತಾದ ಟ್ವೀಟ್ ಮಾಡಿದ ಆನಂದ್ ಮಹಿಂದ್ರಾ
ಹೀಗಾಗಿಯೇ ಕೊಹ್ಲಿ ತಮ್ಮ ನಿರ್ಧಾರವನ್ನು ಹಿಂದೆ- ಮುಂದೆ ನೋಡದೇ ಭಾರತೀಯ ತಂಡದ ನಾಯಕತ್ವ ಬೆನ್ನಲ್ಲೇ ಆರ್‌ಸಿಬಿ ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿ ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ ತಂಡಕ್ಕೆ ಮಾತ್ರ ತಾವು ಆಡುವುದಾಗಿ ಘೋಷಿಸಿದಲ್ಲದೇ ಆರ್‌ಸಿಬಿ ತಂಡವನ್ನು ಮತ್ತಷ್ಟು ಬಲ ತುಂಬಲು ನಾಯಕತ್ವ ಹೊರೆಯಿಂದ ಹೊರ ಬಂದಿದ್ದಾರೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಆರ್‌ಸಿಬಿಯ ಕಪ್ ಗೆಲುವಿನ ಹೋರಾಟದಲ್ಲಿ ಆರ್‌ಸಿಬಿಯ 2022ರ ಆವೃತ್ತಿಗೆ ತಯಾರಿಗಾಗಿ ಡ್ರೇಸಿಂಗ್ ರೊಂನಲ್ಲಿ ತಂಡದ ಆಟಗಾರರು ಹಾಗೂ ಆರ್‌ಸಿಬಿಯ ಕೋಚ್ ಅವರೊಡನೆ ಮಾತುಕತೆ ನಡೆಯಿತು ಎನ್ನಲಾಗಿದೆ.
E Salaa Cup Namde, RCB, IPL, Captain Virat Kohli, ABD, CSK, MS Dhoni, ICC World Cup, BCCI, ICC, Captaincy Step Down.
ಆರ್‌ಸಿಬಿ ನಾಯಕತ್ವ, ಐಪಿಎಲ್ 2021, ವಿರಾಟ್ ಕೊಹ್ಲಿ, ಆರ್‌ಸಿಬಿ, ಈ ಸಲಾ ಕಪ್ ನಮ್ದೇ.