ಬೆಂಗಳೂರು : ಸ್ನೇಹಿತರೇ ನೀವು ಗಮನಿಸಿರಬಹುದು, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವೂ ಸಹ ಬೆಳೆಯುತ್ತಿದೆ. ಒಂದು ಕಾಲದಲ್ಲಿ ನೋಡೊದಾದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೊಸ ವೈಶಿಷ್ಟ್ಯಗಳು ಇರಲಿಲ್ಲ. ಈಗಿರುವ ತಂತ್ರಜ್ಞಾನದೊಂದಿಗೆ ದಿನವೂ ಸಹ ಹೊಸ ಹೊಸ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಾಗುತ್ತಿದೆ.

ಕೆಲವೊಮ್ಮೆ ನಾವು ಫೋನಿನಲ್ಲಿ ಮಾತನಾಡುವಾಗ ಅನೇಕ ಅಡೆತಡೆಗಳು ಉಂಟಾಗುತ್ತವೆ. ಒಮ್ಮೆ ರಾಂಗ್ ಕನೆಕ್ಷನ್ ಆಗಿ ತಪ್ಪು ಧ್ವನಿ ಕೇಳಿಸಿದರೆ ಮತ್ತೆ ಕೆಲವೊಮ್ಮೆ ಇದ್ದಕ್ಕಿದಂತೆ ಫೋನ್ ಕಾಲ್‌ಗಳು ಮಧ್ಯದಲ್ಲಿ ಕಡಿತವಾಗಿ ಬೀಡುತ್ತದೆ. ಪ್ರತಿದಿನವೂ ಇಂತಹ ಅನೇಕ ತಾಂತ್ರಿಕ ಸಮಸ್ಯೆಗಳನ್ನ ಜನ ಅನುಭವಿಸುತ್ತಲೇ ಇರುತ್ತಾರೆ.

ಎಷ್ಟೋ ಬಾರಿ ವೀಕ್ ನೆಟ್‌ವರ್ಕ್ ಇರುವ ಕಾರಣ ಕಾಲ್ ಡ್ರಾಪ್ಸ್ ಸಂಭವಿಸುತ್ತದೆ. ಕಾಲ್ ಡ್ರಾಪ್ಸ್ ಸಮಸ್ಯೆಗಳು ಬಹುತೇಕ ದೂರದ ಪ್ರದೇಶಗಳಲ್ಲಿ ವಾಸಿಸುವ ಬಳಕೆದಾರರ ಜೊತೆ ಮಾತನಾಡುವಾಗ ಅಥವಾ ಮನೆ, ಕಛೇರಿಗಳ ಒಳಗಡೆ ಕುಳಿತು ಮಾತನಾಡುತ್ತಿರುವಾಗ ಸಂಭವಿಸುತ್ತದೆ. ಆ ಸಮಯದಲ್ಲಿ ಕರೆ ಕಡಿತಗೊಳ್ಳಬಹುದು ಅಥವಾ ಇನ್ನೊಬ್ಬರ ಧ್ವನಿ ಸರಿಯಾಗಿ ಕೇಳಿಸದೇ ಇರಬಹುದು.
ಕಡಿಮೆ ಸಿಗ್ನಲ್ ಸಂಪರ್ಕವಿರುವ ಪ್ರದೇಶಗಳಲ್ಲೂ ಕರೆ ಡ್ರಾಪ್‌ಗಳ ಸಮಸ್ಯೆಗಳಿಲ್ಲದೆ ನಿಯಮಿತವಾಗಿ ಫೋನ್ ಕರೆಗಳನ್ನು ಮಾಡಲು ಸಾಧ್ಯವಿದೆ ಎಂದು ನಿಮಗೆ ತಿಳಿದಿದೆಯೆ?

ಹೌದು ಸ್ನೇಹಿತರೆ, ವೈ-ಫೈ ಮೂಲಕ ಕರೆ ಮಾಡುವ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದರೆ ಕಡಿಮೆ ಸಿಗ್ನಲ್ ಸಂಪರ್ಕವಿರುವ ಪ್ರದೇಶಗಳಲ್ಲೂ ಸಹ ಯಾವುದೇ ತೊಂದರೆ ಉಂಟಾಗದಂತೆ ಮಾತನಾಡಬಹುದು.

ಪ್ರಸ್ತುತ ಭಾರತದಲ್ಲಿ ಏರ್‌ಟೆಲ್ ಮತ್ತು ಜಿಯೋ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ಉಚಿತ ವೈ-ಫೈ ಕರೆ ನೀಡುತ್ತಿವೆ. ವೈ-ಫೈ ನೆಟ್‌ವರ್ಕ್ ಸಹಾಯದಿಂದ ಈ ವೈ-ಫೈ ಕಾಲ್ ಫಿಚರ್ ಕೆಲಸ ಮಾಡುತ್ತದೆ. ಆದ್ದರಿಂದ ಬಲವಾದ ವೈ-ಫೈ ಸಿಗ್ನಲ್‌ಗಳಿರುವಲ್ಲಿ ಈ ಸೇವೆಗಳನ್ನು ಬಳಸಲು ಸಾಧ್ಯವಿದೆ.
ವೈ-ಫೈ ಕರೆ ಮಾಡುವ ಆಯ್ಕೆಯನ್ನು ಸಕ್ರಿಯಗೊಳಿಸುವುದು ಹೇಗೆ?

ಆಂಡ್ರಾಯ್ಡ್ ಫೋನ್ ಬಳಕೆದಾರರು – ಆಂಡ್ರಾಯ್ಡ್ ಫೋನಿನಲ್ಲಿ ಸೆಟ್ಟಿಂಗ್ಸ್ ಮೆನುಗೆ ಹೋಗಿ. ನಂತರ ನೆಟ್ವರ್ಕ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಕೆಲವು ಫೋನ್‌ಗಳಲ್ಲಿ ಮೋಬೈಲ್ ನೆಟ್‌ವರ್ಕ್ ಅಥವಾ ಕನೆಕ್ಷನ್ ಅನ್ನುವ ಹೆಸರಲ್ಲಿ ಈ ಆಯ್ಕೆ ಇರುತ್ತದೆ. ನೆಟ್ವರ್ಕ್ ವಿಭಾಗಕ್ಕೆ ಹೋದ ನಂತರ ವೈ-ಫೈ ಪ್ರಿಫರೆನ್ಸ ಆಯ್ಕೆಯನ್ನು ಕ್ಲಿಕ್ ಮಾಡಿ. ತದನಂತರ ಅಡ್ವಾನ್ಸ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ಈಗ ವೈ-ಫೈ ಕರೆ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ನಿಮ್ಮ ಫೋನಿನಲ್ಲಿ ಎರಡು ಸಿಮ್ ಕಾರ್ಡ್ ಇದ್ದರೆ .. ನಿಮ್ಮ ನೆಚ್ಚಿನ ಸಿಮ್ ಕಾರ್ಡ್ ಗಾಗಿ ನೀವು ವೈಫೈ ಕರೆ ಮಾಡುವ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಹೆಚ್ಚಿನ ಫೋನ್‌ಗಳು ನೆಟ್‌ವರ್ಕ್ ವಿಭಾಗದಲ್ಲಿ ವೈಫೈ ಕರೆ ಮಾಡುವ ವೈಶಿಷ್ಟ್ಯವನ್ನು ಹೊಂದಿವೆ. ಕೆಲವು ಫೋನ್‌ಗಳು ನೇರವಾಗಿ ನೋಟಿಫಿಕೇಶನ್ ಬಾರ್‌ನಲ್ಲಿ ವೈ-ಫೈ ಕರೆ ಆಯ್ಕೆಯನ್ನು ಹೊಂದಿವೆ.
ಐಫೋನ್ ಬಳಕೆದಾರರು – ಐಫೋನ್‌ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ. ‘ಮೊಬೈಲ್ ಡೇಟಾ’ ಮೇಲೆ ಕ್ಲಿಕ್ ಮಾಡಿ ಮತ್ತು ವೈ-ಫೈ ಕರೆ ಆಯ್ಕೆಮಾಡಿ.

ನಿಮ್ಮ ಟೆಲಿಕಾಂ ಆಪರೇಟರ್ ಸಪೋರ್ಟ್ ಮಾಡಿದರೆ ಮಾತ್ರ ವೈ-ಫೈ ಕರೆ ಮಾಡುವ ವೈಶಿಷ್ಟ್ಯವು ಕಾಣಿಸಿಕೊಳ್ಳುತ್ತದೆ. ನಿಮ್ಮ ಫೋನ್‌ನ ಸ್ಟೇಟಸ್ ಬಾರ್‌ನಲ್ಲಿ ಟೆಲಿಕಾಂ ಆಪರೇಟರ್ ಹೆಸರಿನಲ್ಲಿ (ಉದಾಹರಣೆಗೆ ಏರ್‌ಟೆಲ್) ವೈ-ಫೈ ಕಾಣಿಸಿಕೊಳ್ಳುತ್ತದೆ. ಅದರ ನಂತರ ನೀವು ಕಡಿಮೆ ಸಿಗ್ನಲ್ ಪ್ರದೇಶಗಳಲ್ಲಿಯೂ ನಿರಂತರವಾಗಿ ಯಾವುದೇ ತೊಂದರೆ ಇಲ್ಲದಂತೆ ಕರೆ ಮಾಡಬಹುದು.