ಬೋಸ್ಟನ್ (USA) : ಅಮೆರಿಕಾ ಪ್ರವಾಸದಲ್ಲಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಚರ್ಚೆಯ ಭಾಗವಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ಸಂಪೂರ್ಣವಾಗಿ ಖಂಡನೀಯ ಎಂದು ಅವರು ಹೇಳಿದ್ದಾರೆ. ಭಾರತದ ಬಗ್ಗೆ ತಿಳಿದಿರುವ ಪ್ರತಿಯೊಬ್ಬರೂ ಸಹ ದೇಶದ ಇತರ ಭಾಗಗಳಲ್ಲಿ ನಡೆಯುವ ಇದೇ ರೀತಿಯ ಘಟನೆಗಳನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ : ಭಾರಿ ಮಳೆಗೆ ಜಲಾವೃತವಾದ ಬೆಂಗಳೂರು ಅಂ. ವಿಮಾನ ನಿಲ್ದಾಣ – ಟ್ರಾಕ್ಟರ್‌ನಲ್ಲಿ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು
ನಿರ್ಮಲಾ ಸೀತಾರಾಮನ್ ಅವರನ್ನು ಪ್ರಧಾನಿ ಮತ್ತು ಇತರ ಹಿರಿಯ ಮಂತ್ರಿಗಳು ಲಖಿಂಪುರ್ ಘಟನೆಗೆ ಏಕೆ ಪ್ರತಿಕ್ರಿಯಿಸಲಿಲ್ಲ – ಎಂದು ಕೇಳಿದ ಪ್ರಶ್ನೆಗೆ, ನಿರ್ಮಲಾ ಸೀತಾರಾಂ ಅವರು “ಖಂಡಿತವಾಗಿಯೂ ಅಂತಹದ್ದೇನೂ ಇಲ್ಲ, ಆ ಘಟನೆ ಸಂಪೂರ್ಣವಾಗಿ ಖಂಡನೀಯ. ಇಂತಹ ಸಮಸ್ಯೆಗಳು ಭಾರತದ ಹಲವು ಭಾಗಗಳಲ್ಲಿ ಇವೆ. ನನ್ನ ಕಾಳಜಿ ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಇದೇ ರೀತಿಯ ಘಟನೆಗಳ ಬಗ್ಗೆಯೂ ಇದೆ. ಜನರು ಆ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಪ್ರಸ್ತುತ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಘಟನೆಯನ್ನು ಯಾರೇ ಮಾಡಿದರೂ .. ತನಿಖೆಯ ಮೂಲಕ ನ್ಯಾಯ ಸಿಕ್ಕೆ ಸಿಗುತ್ತದೆ. ಎಂದು ರಕ್ಷಣಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.