ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ವಿರುದ್ಧ ಪ್ರಖ್ಯಾತ ತಂಪು ಪಾನೀಯ ಸಂಸ್ಥೆ ಕೋಕಾ-ಕೋಲಾ ಇಂಡಿಯಾ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದೆ. 2017 ರಲ್ಲಿ, ಕಂಪನಿಯು ಸೌರವ್ ಗಂಗೂಲಿಯವರನ್ನು ಕೋಕಾ-ಕೋಲಾ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು. ಇನ್ನು ಅವರ ಸಹಭಾಗಿತ್ವದ ಬಗ್ಗೆ ಪ್ರಮೂಖ ನಿರ್ಧಾರ ತೆಗೆದುಕೊಂಡಿರುವ ಸಂಸ್ಥೆಯು ಅದನ್ನು ಪ್ರಕಟಿಸಿದೆ.

ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿಯವರು ಇನ್ನು ಮೂರು ವರ್ಷಗಳ ಕಾಲ ಮುಂದುವರೆಯಲ್ಲಿದ್ದಾರೆ. ಕೋಕಾ ಕೋಲಾದ ನೈರುತ್ಯ ಏಷ್ಯಾ ಉಪಾಧ್ಯಕ್ಷ ಅರ್ನಬ್ ರಾಯ್ ಯವರು ಈ ನಿರ್ಧಾರವನ್ನ ಸ್ವಾಗತಿಸಿದ್ದು, ಸೌರವ್ ಗಂಗೂಲಿಯೊಂದಿಗೆ ಇನ್ನೂ ಮೂರು ವರ್ಷಗಳ ಕಾಲ ಕೆಲಸ ಮಾಡಲು ಸಂತೋಷವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ಕರೆನ್ಸಿಗಳ ದರ್ಬಾರ್ ಬಲು ಜೋರು..! ನಿನ್ನೆ ಅಮಿತಾಬ್ ಬಚ್ಚನ್..ಇಂದು ರಣವೀರ್ ಸಿಂಗ್ ..!

ಸೌರವ್ ಈಗಲೂ ಡಿಟಿಡಿಸಿ, ಟಾಟಾ ಟೆಟ್ಲೆ, ಪೂಮಾ, ಎಸ್ಲಿಯರ್ ಲೆನ್ಸ್ ಮತ್ತು ಸೆಂಕೋ ಗೋಲ್ಡ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಒಂದು ವರ್ಷಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲು ಸೌರವ್ ಪ್ರತಿ ಬ್ರಾಂಡ್‌ನಿಂದ ಸುಮಾರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.