ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ, ಪಾಸಿಟಿವ್ ಕೇಸ್‌ಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದರೂ ಸಹ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಮೈ ಮರೆಯುವಂತಿಲ್ಲ. ಹಾಗಾಗಿ ಜನರ ಹಿತ ದೃಷ್ಠಿಯಿಂದ ನೈಟ್ ಕರ್‌ಫ್ಯೂವನ್ನು ಅ. 25 ರವರೆಗೆ ವಿಸ್ತರಣೆ ಮಾಡಲಾಗಿದೆ. ಈಗ ಹಬ್ಬದ ಸಂಭ್ರಮ ಬೇರೆ ಇರುವುದರಿಂದ ಈ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : ಭಾರಿ ಮಳೆಗೆ ಜಲಾವೃತವಾದ ಬೆಂಗಳೂರು ಅಂ. ವಿಮಾನ ನಿಲ್ದಾಣ – ಟ್ರಾಕ್ಟರ್‌ನಲ್ಲಿ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು

ಮಂಗಳವಾರ ನಗರದಲ್ಲಿ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ರವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸೆಕ್ಷನ್ 144 ರಾತ್ರಿ 10.00 ಘಂಟೆಯಿಂದ ಬೆಳಿಗ್ಗೆ 5.00 ಘಂಟೆಯವರೆಗೂ ಜಾರಿಯಲ್ಲಿರುತ್ತದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಿಸಲಾದ ಆದೇಶಗಳನ್ನು ಸಡಿಲಿಸಲಾಗುತ್ತದೆ.
ಇದನ್ನೂ ಓದಿ : ಆ ತಟ್ಟೆಯ ಬೆಲೆ ನಿಮಗೆ ಗೊತ್ತಾ ? ಬರೋಬ್ಬರಿ 13 ಕೋಟಿ ಬೆಲೆಯ ಆ ತಟ್ಟೆಯ ಬಗ್ಗೆ ತಿಳಿಯಲೇಬೇಕು

ಈ ಸೂಚನೆಗಳನ್ನು ಉಲ್ಲಂಘಿಸುವವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಅಡಿಯಲ್ಲಿ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ 2020 ರ ಸೆಕ್ಷನ್ 188 ಐಪಿಸಿ ಮತ್ತು ಸೆಕ್ಷನ್ 4, 5 ಮತ್ತು 10 ರ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.