ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ, ಸುಕುಮಾರ್ ನಿರ್ದೇಶನದಲ್ಲಿ ಬಂದಿರುವ ಇತ್ತೀಚಿನ ಚಿತ್ರ ‘ಪುಷ್ಪ’ ದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬರುವ ಚಿತ್ರದ ಮೊದಲ ಭಾಗ ‘ಪುಷ್ಪ: ದಿ ರೈಸ್’ ಡಿಸೆಂಬರ್ 17 ರಂದು ಬಿಡುಗಡೆಯಾಗಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ 11.07 ಕ್ಕೆ ರಶ್ಮಿಕಾ ಪಾತ್ರಧಾರಿ ‘ಶ್ರೀ ವಲ್ಲಿ’ಯ ಹಾಡನ್ನು ಚಿತ್ರ ತಂಡ ಬಿಡುಗಡೆ ಮಾಡಲಿದೆ. ಮಂಗಳವಾರ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಪ್ರೇಕ್ಷಕರಲ್ಲಿ ಉತ್ಸಾಹವನ್ನು ಮತ್ತು ಕುತೂಹಲವನ್ನು ಹೆಚ್ಚಿಸಲು ಈ ಪ್ರೋಮೋ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : Super Star Rajinikanth : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಟ್ಟೆ’ ಟೀಸರ್ ಬಿಡುಗಡೆ ದಿನಾಂಕ ಫಿಕ್ಸ್
ಫಹಾದ್ ಫಾಜಿಲ್, ಧನುಂಜಯ್, ಸುನಿಲ್, ರಾವ್ ರಮೇಶ್, ಅಜಯ್ ಘೋಷ್, ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.