ದೆಹಲಿ : ದೇಶದಲ್ಲಿ ವಾಯುಯಾನ ಕ್ಷೇತ್ರ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಕರೋನಾದಿಂದ ತೊಂದರೆಗೊಳಗಾದ ನಾಗರಿಕ ವಿಮಾನಯಾನವು ಮತ್ತೆ ಚೇತರಿಸಿಕೋಳ್ಳುತ್ತಿದೆ. ಟಾಟಾ ಗ್ರೂಪ್ ಇತ್ತಿಚೇಗೆ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿರುವುದರಿಂದ, ಹೆಚ್ಚಿನ ಖಾಸಗಿ ಕಂಪನಿಗಳು ವಿಮಾನಯಾನ ಕ್ಷೇತ್ರವನ್ನು ಪ್ರವೇಶಿಸಲು ಆಸಕ್ತಿ ತೋರುತ್ತಿವೆ. ಇದರ ಭಾಗವಾಗಿ, ಆಕಾಶ್ ಏರ್ಲೈನ್ಸ್ ವಿಮಾನಯಾನ ಸಂಸ್ಥೆಯು ಶೀಘ್ರದಲ್ಲೇ ಭಾರತದಲ್ಲಿ ವಿಮಾನ ಹಾರಾಟ ನಡೆಸಲಿದೆ. ಭಾರತ ಸರ್ಕಾರ ಆಕಾಶ್ ಏರ್ಲೈನ್ಸ್ ಗೆ ಗ್ರೀನ್ ಸಿಗ್ನಲ್ ನೀಡಿದೆ.
ಇದನ್ನೂ ಓದಿ : ಅಂಬಾನಿ 100 ಬಿಲಿಯನ್ ಡಾಲರ್ ಗಣ್ಯರ ಕ್ಲಬ್ ಸೇರಿದ ಮೊದಲ ಏಷ್ಯನ್

ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಯಿಂದ ಆಕಾಶ್ ಏರ್ಲೈನ್ಸ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ. ವಿಮಾನಗಳು 2022 ರ ಬೇಸಿಗೆಯಿಂದ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರೀಕ್ಷೆಯನ್ನು ಹೊಂದಿವೆ. ಇನ್ನೂ ಖ್ಯಾತ ಹೂಡಿಕೆ ಗುರು ಎಂದೇ ಬಿಂಬಿತರಾದ ರಾಕೇಶ್ ಜುಂಜುನ್ವಾಲಾ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಜೊತೆಯಲ್ಲಿ ಮಾಜಿ ಇಂಡಿಗೊ ಅಧ್ಯಕ್ಷ ಆದಿತ್ಯ ಘೋಷ್ ಕೂಡ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ 70 ವಿಮಾನಗಳನ್ನು ಹಾರಾಡಿಸಲು ಆಕಾಶ್ ಏರ್ಲೈನ್ಸ್ ಯೋಜಿಸಿದೆ.