ಒಂದು ಪ್ಲೇಟ್ ಖರೀದಿಸಲು ಅಬ್ಬಬ್ಬಾ ಅಂದರೆ ಎಷ್ಟು ವೆಚ್ಚವಾಗುತ್ತದೆ. ಒಂದು ನೂರು ರೂಪಾಯಿ ಅಥವಾ ಇನ್ನೂರು ರೂಪಾಯಿ, ಇನ್ನೂ ಬೆಳ್ಳಿಯ ತಟ್ಟೆ ಎಂದರೆ ಒಂದು ಲಕ್ಷನೋ ಅಥವಾ ಎರಡು ಲಕ್ಷ ರೂಪಾಯಿಯೋ ಇರಬಹುದು. ಆದರೆ ಇತ್ತಿಚೇಗೆ ಸ್ಕಾಟ್ಲೆಂಡಿನ ಪುರಾತನ ತಟ್ಟೆಯೊಂದು ಬರೊಬ್ಬರಿ US $ 1.7 ಮಿಲಿಯನ್ ಅಥವಾ ಭಾರತೀಯ ಕರೆನ್ಸಿಯಲ್ಲಿ ಸುಮಾರು 13 ಕೋಟಿಗಳಿಗೆ ಮಾರಾಟವಾಗಿದೆ ಎಂದು ತಿಳಿದರೆ ಇಂತಹ ಒಂದು ಪ್ಲೇಟು ಸಹ ಇದೆಯೇ ಎಂದು ನೀವು ಅಚ್ಚರಿ ಪಡುತ್ತಿದ್ದಿರಾ. ಹಾಗಾದರೆ ಬನ್ನಿ ಈ ದುಬಾರಿ ಬೆಲೆಯ ಆ ತಟ್ಟೆಯ ಬಗ್ಗೆ ತಿಳಿದುಕೋಳ್ಳೋಣ

ಮಾಧ್ಯಮ ವರದಿಗಳ ಪ್ರಕಾರ, ಬ್ರಿಟಿಷ್ ಹರಾಜುದಾರ ಲಿಯಾನ್ ಮತ್ತು ಟರ್ನ್‌ಬುಲ್ ರವರ ಸ್ಕಾಟಿಷ್ ಗಡಿಯಲ್ಲಿರುವ ಲೋವುಡ್ ಹೌಸ್ ಕಂಪನಿಯಲ್ಲಿ ಯುರೋಪಿಯನ್ ಸೆರಾಮಿಕ್ಸ್ ತಜ್ಞರು ಕೆಲವು ವಸ್ತುಗಳನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ಹರಾಜು ನಡೆಯುವ ಸ್ಥಳದಲ್ಲಿ 16 ನೇ ಶತಮಾನದ ತಟ್ಟೆಯೊಂದು ಸಹ ಸೇರಿತ್ತು. ಇದು ಬಹಳ ಹಳೆಯ ವಿಶೇಷ ಪ್ಲೇಟ್ ಆಗಿದ್ದರಿಂದ ಕಂಪನಿಯು ಅದನ್ನು ಹರಾಜು ಹಾಕಿತು. ಲೋವುಡ್ ಹೌಸ್ ನಲ್ಲಿ ಹರಾಜು ಹಾಕಿದ 400 ವಸ್ತುಗಳಲ್ಲಿ ಈ ಪ್ಲೇಟ್ ಕೂಡ ಒಂದು. ಆದರೆ ಜನರು ಈ ತಟ್ಟೆಗೆ ಇಷ್ಟೊಂದು ಆಸಕ್ತಿಯನ್ನು ತೋರಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಹರಾಜಿನಲ್ಲಿ ತಟ್ಟೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಅವರಿಗೆ ಅಚ್ಚರಿ ಮೂಡಿಸಿತು.
ಇದನ್ನೂ ಓದಿ : Coal Shortage : ಕತ್ತಲಾಗುತ್ತವೆಯೇ ಕರುನಾಡು ಸಹಿತ ದಕ್ಷಿಣ ಭಾರತದ ರಾಜ್ಯಗಳು
500 ವರ್ಷ ಹಳೆಯದು ಈ ತಟ್ಟೆ : ಈ ತಟ್ಟೆಯು 27 ಸೇಂ.ಮೀ ಸುತ್ತಳತೆ ಹೊಂದಿದ್ದು ಅದರ ಮೇಲೆ ಸ್ಯಾಮ್ಸನ್ ದೇಲೀಲಾ ಬೈಬಲ್ ಕಥೆಯಲ್ಲಿ ದೃಶ್ಯವನ್ನು ಬಹಳ ಸುಂದರವಾಗಿ ಕೆತ್ತಿದ್ದಾರೆ. ಇಟಾಲಿಯನ್ ಮಣ್ಣಿನಿಂದ ಮಾಡಿದ ಈ ತಟ್ಟೆಯನ್ನು ಮಯೋಲಿಕಾ ಎಂದು ಸಹ ಕರೆಯಲಾಗುತ್ತದೆ. ಇದು ಸುಮಾರು 500 ವರ್ಷಗಳಷ್ಟು ಹಳೆಯದು. ಇದನ್ನು ಕುಂಬಾರನೂ ಹಾಗೂ ಕಲಾವಿದನೂ ಆದ ನಿಕೊಲಾಡಾ ಉರ್ಬಿನೊ 1520-23ರಲ್ಲಿ ತಯಾರಿಸಿದ್ದನು.

ಈ ತಟ್ಟೆಯನ್ನ ಮೊದಲಿಗೆ 1 ಲಕ್ಷ 9 ಸಾವಿರ ಡಾಲರ್ ಮತ್ತು 1 ಲಕ್ಷ 63 ಡಾಲರ್ ಗಳ ನಡುವೆ ನಿಗದಿ ಮಾಡಲಾಗಿತ್ತು ಆದರೆ ಇದನ್ನು ಹರಾಜು ಮಾಡಿದಾಗ ದಾಖಲೆಯ $ 1.7 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ. 12,96,01,626) ಬಿಡ್ ಮಾಡಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಬಿಡ್ ಅದರ ಮೂಲ ಅಂದಾಜುಗಿಂತ 10 ಪಟ್ಟು ಅಧಿಕವಾಗಿದೆ. ಈ ಕುರಿತು ಹರ್ಷ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೇವಿನ್ ಸ್ಟ್ರೇಂಜ್, “ಈ ಪ್ಲೇಟ್‌ಗೆ ಎಷ್ಟು ಬಿಡ್‌ಗಳು ಬರುತ್ತವೆ ಎಂದು ನಮಗೆ ತಿಳಿದಿರಲಿಲ್ಲ ಆದರೆ ಇದು ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದು ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.