ಹಿಂದಿ ಬಿಗ್ ಬಾಸ್ ಸೀಸನ್ 15 ರಲ್ಲಿ ಮಿಶಾ ಅಯ್ಯರ್ – ಲಿಶಾನ್ ಸೆಹಗಲ್ ನಡುವಣ ನಡೆದ ಕುಚ್ ಕುಚ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ತೆರೆಯ ಮೇಲೆ ಭಿತ್ತರ ಆದ ಇವರಿಬ್ಬರ ನಡುವಣ ಲಿಪ್ ಲಾಕ್ ದೃಶ್ಯ ಪ್ರೇಕ್ಷಕರ ಆಕ್ರೋಶಕ್ಕೂ ಕಾರಣವಾಗಿದೆ. ಕಳೆದ ಭಾನುವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಮಿಶಾ ಹಾಗೂ ಲಿಶಾನ್ ಒಂದೇ ಬ್ಲಾಂಕೆಟ್ ಒಳಗೆ ಲವ್ವಿ-ಡವ್ವಿ ಆಡಿರುವುದು ಕಂಡುಬಂದಿದೆ. ಅವರು ಲಿಪ್ ಲಾಕ್ ಮಾಡಿದ್ದು ಈ ಬಗ್ಗೆ ಬಿಗ್ ಬಾಸ್ ವೀಕ್ಷಕರು ಟ್ವೀಟ್ ಮಾಡಿ ಅಸಹನೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಆರಂಭವಾದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ನೋಡುಗರಿಗೆ ಇರಿಸುಮುರಿಸು ಉಂಟು ಮಾಡಿದೆ. ಆರಂಭದಲ್ಲಿ ಇವರಿಬ್ಬರು ಆತ್ಮೀಯ ಗೆಳೆಯರಂತೆ ವೀಕ್ಷಕರಿಗೆ ಕಂಡುಬಂದಿದ್ದರು. ಆದರೆ ಇವರಿಬ್ಬರೂ ವೀಕೆಂಡ್ ಕಾ ವಾರ್ ಮೊದಲ ಎಪಿಸೋಡ್ ಪ್ರಸಾರವಾದಾಗ ಲವ್ ನಲ್ಲಿ ಬಿದ್ದಿರುವುದು ವೀಕ್ಷಕರಿಗೆ ಗೊತ್ತಾಯಿತು. ಆದರೆ ಇವರಿಬ್ಬರ ಪ್ರೇಮದ ಆಟಗಳು ವೀಕ್ಷಕರಿಗೆ ಹಿಡಿಸಿಲ್ಲ.
ಇದನ್ನೂ ಓದಿ : PINCODE or POSTAL CODE : ಪಿನ್ ಕೋಡ್‌ನಲ್ಲಿ ಏಕೆ ಕೇವಲ 6 ಅಂಕೆಗಳು ಇರುತ್ತವೆ ಗೊತ್ತೇ ?

“ಫ್ಯಾಮಿಲಿ ಜೊತೆ ಕುಳಿತುಕೊಂಡು ನೋಡುವಾಗ ಈ ರೀತಿಯ ದೃಶ್ಯಗಳು ಬಂದರೆ ಚೆನ್ನಾಗಿರುವುದಿಲ್ಲ. ಈ ರೀತಿಯ ದೃಶ್ಯಗಳು ಬಿಗ್ ಬಾಸ್ ನಲ್ಲಿ ಪ್ರಸಾರ ಆಗಬಾರದು” ಎಂದು ಬಿಗ್ ಬಾಸ್ ವೀಕ್ಷಕರು ಟ್ವೀಟ್ ಮಾಡಿದ್ದಾರೆ.
ಮನೆ ಮಂದಿಗೂ ಗೊತ್ತಿದೆ ರೋಮಾನ್ಸ್ ವಿಚಾರ: ಮಿಶಾ ಹಾಗೂ ಲಿಶಾನ್ ನಡುವಣ ರೋಮಾನ್ಸ್ ವೀಕ್ಷಕರಿಗೆ ಮಾತ್ರವಲ್ಲ ಬಿಗ್ ಬಾಸ್ ನ ಮನೆಮಂದಿಗೂ ತಿಳಿದಿದೆ. ಈ ಬಗ್ಗೆ ಪ್ರತಿಸ್ಪರ್ಧಿಗಳು ಇವರಿಬ್ಬರ ಕಾಲೆಳೆಯುತ್ತಿರುವ ಪ್ರಸಂಗವು ವರದಿಯಾಗಿದೆ. ಪ್ರತಿಸ್ಪರ್ಧಿಗಳು ” ನೀವಿಬ್ಬರೂ ಆಯಸ್ಕಾಂತದ ರೀತಿ ಒಬ್ಬರನ್ನೊಬ್ಬರು ಅಂಟಿಕೊಂಡಿರಿ” ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ಇವರಿಬ್ಬರನ್ನು ಈಗಾಗಲೇ ಮನೆಮಂದಿ ಹೊಸ ಕಪಲ್ ಎಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : Viral Video of Salman Khan and Sharukh Khan : ಸಂಕಷ್ಟದಲ್ಲಿರುವ ಶಾರುಖ್ ಖಾನ್ ಗೆ ಸಲ್ಮಾನ್ ಸಾಥ್ – ಹಳೆಯ ವಿಡಿಯೋ ವೈರಲ್

ಕಳೆದ ಭಾನುವಾರ ನಡೆದ ಮೊದಲ ವೀಕೆಂಡ್ ಕಾ ವಾರ್ ಎಪಿಸೋಡ್ ನಲ್ಲಿ ಮಿಶಾ ಹಾಗೂ ಲಿಶಾನ್ ಒಟ್ಟಾಗಿ ಕೈ ಹಿಡಿದು ಕುಳಿತುಕೊಂಡರು. ಈ ವೇಳೆ ಇಬ್ಬರೂ ತಮ್ಮ ಪ್ರೇಮದ ಬಗ್ಗೆ ಪರಸ್ಪರ ಮನ ಬಿಚ್ಚಿ ಮಾತನಾಡಿದ ಪ್ರಸಂಗವೂ ನಡೆಯಿತು. ಕೇವಲ ಎಂಟು ದಿನಗಳಲ್ಲಿ ನಡೆದ ಈ ಪ್ರೇಮ ಪ್ರಸಂಗವನ್ನು ಸಲ್ಮಾನ್ ಖಾನ್, ‘ಫಾಸ್ಟೆಸ್ಟ್ ರೋಮಾನ್ಸ್‘ ಎಂದು ಬಣ್ಣಿಸಿದರು.
ಇದನ್ನೂ ಓದಿ : ಆ ತಟ್ಟೆಯ ಬೆಲೆ ನಿಮಗೆ ಗೊತ್ತಾ ? ಬರೋಬ್ಬರಿ 13 ಕೋಟಿ ಬೆಲೆಯ ಆ ತಟ್ಟೆಯ ಬಗ್ಗೆ ತಿಳಿಯಲೇಬೇಕು
ಸಾಹಿಲ್ ಶ್ರಾಫ್ ಔಟ್: ಕಳೆದ ಭಾನುವಾರ ಪ್ರಸಾರವಾದ ಎಪಿಸೋಡ್ ನಲ್ಲಿ ನಟ ಹಾಗೂ ಮಾಡೆಲ್ ಸಾಹಿಲ್ ಶ್ರಾಫ್ ಎಲಿಮಿನೇಟ್ ಆದರು. ಇವರು ಈ ಸೀಸನ್ ನಲ್ಲಿ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎನಿಸಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯ ವೋಟನ್ನು ಸಾಹಿಲ್ ಶ್ರಾಫ್ ಪಡೆದಿದ್ದಾರೆ ಎಂದು ಸಲ್ಮಾನ್ ಖಾನ್ ಘೋಷಣೆ ಮಾಡಿದರು.