ಬೆಂಗಳೂರು : ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿ ನೀರು ನಿಂತ ಕಾರಣ ಕ್ಯಾಬ್‌ಗಳು ಮತ್ತು ಖಾಸಗಿ ವಾಹನಗಳು, ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸುಗಳು ಸೇರಿದಂತೆ ಬಹುತೇಕ ವಾಹನಗಳು ಸಿಕ್ಕಿಹಾಕಿಕೊಂಡಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 178.3 ಮಿಮೀ ಮಳೆಯಾಗಿದೆ.

ವಿಮಾನ ನಿಲ್ದಾಣದ ನಿರ್ಗಮನ ಮತ್ತು ಆಗಮನದ ಗೇಟ್‌ಗಳಿಗೆ ಹೋಗುವ ರಸ್ತೆಗಳಲ್ಲಿ ನೀರು ತುಂಬಿರುವುದನ್ನು ಪ್ರಯಾಣಿಕರು ತಮ್ಮ ಮೋಬೈಲ್‌ಗಳಲ್ಲಿ ಚಿತ್ರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ : Coal Shortage : ಕತ್ತಲಾಗುತ್ತವೆಯೇ ಕರುನಾಡು ಸಹಿತ ದಕ್ಷಿಣ ಭಾರತದ ರಾಜ್ಯಗಳು
Flooding on roads leading to and inside the boundary of the Bengaluru International Airport on Monday night. Few air travelers reached the airport in tractors when their cabs were halted on the road in the rains. pic.twitter.com/VywA2y24Wa
— Prajwal (@prajwalmanipal) October 12, 2021
ಇನ್ನೂ ಪ್ರತಿಕೂಲ ಹವಾಮಾನದ ಕಾರಣ ಒಟ್ಟಾರೆಯಾಗಿ 11 ವಿಮಾನಗಳು ವಿಳಂಬವಾಗಿದ್ದವು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣಗಳಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾಗಿದ್ದರಿಂದ ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಕರೆಯಲು ಮತ್ತು ಡ್ರಾಪ್ ಮಾಡುವ ಸಲುವಾಗಿ ಹೋಗಲು ನಿರಾಕರಿಸಿದಾಗ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತಲುಪಲು ಟ್ರ್ಯಾಕ್ಟರ್‌ನಲ್ಲಿ ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಈ ಸನ್ನಿವೇಶಗಳನ್ನ ಕೂಡ ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ಕರೆನ್ಸಿಗಳ ದರ್ಬಾರ್ ಬಲು ಜೋರು..! ನಿನ್ನೆ ಅಮಿತಾಬ್ ಬಚ್ಚನ್..ಇಂದು ರಣವೀರ್ ಸಿಂಗ್ ..!

ಇನ್ನು ಕೋನಪ್ಪನ ಅಗ್ರಹಾರದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಓರ್ವ ಮೃತಪಟ್ಟಿದ್ದಾನೆ ಎಂದು ಬೆಂಗಳೂರು ಪಶ್ಚಿಮ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಂಜೀವ್ ಎಂ ಪಾಟೀಲ್, ಮನೆಯಲ್ಲಿ ಇಬ್ಬರು ಜನರಿದ್ದು, ಇನ್ನೊಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : PINCODE or POSTAL CODE : ಪಿನ್ ಕೋಡ್‌ನಲ್ಲಿ ಏಕೆ ಕೇವಲ 6 ಅಂಕೆಗಳು ಇರುತ್ತವೆ ಗೊತ್ತೇ ?

ಮುಂದಿನ ನಾಲ್ಕು ದಿನಗಳಲ್ಲಿ ಕರ್ನಾಟಕವು ಪೂರ್ವ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಕಾರಣದಿಂದ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿರುವ ಪ್ರಕಾರ ಕರ್ನಾಟಕ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು ಮತ್ತು ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ಕರ್ನಾಟಕದ ದಕ್ಷಿಣ ಭಾಗದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.