ಬಳ್ಳಾರಿ :- ರಾಜ್ಯಸಭಾ ಸಂಸದ ಡಾ. ನಾಸಿರ್ ಹುಸೇನ್ ( MP Naseer Hussain) ಅವರ ತಾಯಿ ಅಕ್ತಾರುನ್ನಿಸರವರು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ 9.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಂಸದರ ತಾಯಿ ಅಗಲಿಕೆಗೆ ಕಾಂಗ್ರೆಸ್ ಗಣ್ಯರು ಹಾಗೂ ಕುಟುಂಬ ವರ್ಗದವರು ಸಂತಾಪವನ್ನು ಸೂಚಿಸಿದ್ದಾರೆ. ಸಂಸದರಾದ ನಾಸಿರ್ ಹುಸೇನ್ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಇಂದು ಮಧ್ಯಾಹ್ನ ಜೋಹರ್ ನಮಾಜ್ ಬಳಿಕ ಬಳ್ಳಾರಿಯ ಕೌಲ್ ಬಜಾರ್ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

