ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಗೆ ಅನೇಕ ಬಾಲಿವುಡ್ ತಾರೆಯರು ಬೆಂಬಲಕ್ಕೆ ಬಂದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಮೂಲಕ ಅನೇಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರೆ ಸಲ್ಮಾನ್ ಖಾನ್ ನೇರವಾಗಿ ಮನೆಗೆ ಹೋಗಿ ಶಾರುಖ್ ಖಾನ್ ಜೊತೆ ಮಾತನಾಡಿದ್ದರು.
ಈಗ ವಿಷಯ ಏನಪ್ಪ ಅಂದರೆ, ಶಾರುಖ್ ಅವರ ಕುಟುಂಬ ಸಂಕಷ್ಟದಲ್ಲಿದ್ದಾಗ ಸಲ್ಲು ಭಾಯಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಶಾರುಖ್ ಖಾನ್ ಹೇಳಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಶಾರುಕ್ ಮಗ ಆರ್ಯನ್‌ನಿಗೆ ಜಾಮೀನು ಇಲ್ಲ – ಮತ್ತೆ ನ್ಯಾಯಂಗ ಬಂಧನಕ್ಕೆ ಆದೇಶ
ಅದು ಸಲ್ಮಾನ್ ನಡೆಸಿಕೊಡುವ ‘ದಸ್ ಕಾ ದಮ್’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಈ ವಿಡಿಯೋ. ರಾಣಿ ಮುಖರ್ಜಿಯವರೊಂದಿಗೆ ಬಾದ್‌ಶಾ ಶಾರುಖ್ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದ ನಿರೂಪಕ ಸಲ್ಮಾನ್, ‘ನಿಮಗೆ ತೊಂದರೆಯಾದಾಗ ನಿಮ್ಮ ಜೊತೆ ಯಾರು ನಿಲ್ಲುತ್ತಾರೆ?’ ಎಂದು ಶಾರುಖ್ ಗೆ ಕೇಳಿದರು.

ಬದಲಾಗಿ ‘ಸಲ್ಮಾನ್ ಯಾರ್ .. ನಾನು, ನನ್ನ ಕುಟುಂಬದ ಸಮಸ್ಯೆಗಳು ಎದುರಾದಾಗ ನೀವು ಖಂಡಿತವಾಗಿಯೂ ನನ್ನೊಂದಿಗೆ ಇರುತ್ತೀರಿ’ ಎಂದರು. ಸಲ್ಲುಭಾಯಿ ಇದಕ್ಕೆ ಹೌದು ಎಂದು ಉತ್ತರಿಸಿದರು. ನಂತರ ಇಬ್ಬರು ಸ್ಟಾರ್‌ಗಳು ಭಾವನಾತ್ಮಕವಾಗಿ ಅಪ್ಪಿಕೊಂಡರು. ಆರ್ಯನ್ ಡ್ರಗ್ಸ್ ಪ್ರಕರಣದಲ್ಲಿ ಸಲ್ಮಾನ್ ಶಾರುಖ್ ಖಾನ್ ಅವರನ್ನು ಉಲ್ಲೇಖಿಸುತ್ತಾ .. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು 2018 ರ ಹಳೆಯ ವಿಡಿಯೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.