ಯಾದಗಿರಿ : ಕಳೆದ ಭಾನುವಾರ ರಾತ್ರಿ ಯಾದಗಿರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು ಇದನ್ನು ವಿರೋಧಿಸಿದ ಆ ಮಹಿಳೆಯನ್ನು ದುಷ್ಕರ್ಮಿಗಳು ಜೀವಂತವಾಗಿ ಸುಟ್ಟಿದ್ದರು ಈ ಘಟನೆಯ ಪ್ರಮುಖ ಆರೋಪಿ ತದನಂತರ ಪೊಲೀಸರ ಮುಂದೆ ಶರಣಾಗಿದ್ದನು. ಇದೀಗ ಈ ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ : Bollywood Drug Case : ಶಾರುಖ್ ಪುತ್ರ ಆರ್ಯನ್ ಖಾನ್ ಗೆ ನಟ ಹೃತಿಕ್ ರೋಷನ್ ವಿಶೇಷ ನೋಟ್

ಆರೋಪಿಯನ್ನು ಚೌಡೇಶ್ವರಿಹಾಲ್ ಗ್ರಾಮ ನಿವಾಸಿ ಗಂಗಪ್ಪ ಬಸಪ್ಪ ಆರೋಲಳ್ಳಿ ಎಂದು ಗುರುತಿಸಲಾಗಿದ್ದು, “ಈತ ಭಾನುವಾರ ತಡರಾತ್ರಿ ಸಂತ್ರಸ್ತೆಯ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಇದಕ್ಕೆ ವಿರೋಧ ಪಡಿಸಿದ್ದರಿಂದ ತನ್ನ ಬೈಕ್‌ನಿಂದ ಪೆಟ್ರೋಲ್ ತಂದು ಮಹಿಳೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ” ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಹೇಳಿದ್ದಾರೆ.