ಶ್ರೀನಗರ : ಮತ್ತೊಮ್ಮೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು ಭಯೋತ್ಪಾದಕರ ಗುಂಡುಗಳಿಗೆ ಗುರಿಯಾಗಿದ್ದಾರೆ. ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಂದು ಮುಂಜಾನೆ 11:15 ರ ಸುಮಾರಿಗೆ ಭಯೋತ್ಪಾದಕರು ಶ್ರೀನಗರದ ಸಂಗಮ್ ಈದ್ಗಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯ ಮೇಲೆ ದಾಳಿ ನಡೆಸಿ ಸರ್ಕಾರಿ ಶಾಲಾ ಶಿಕ್ಷಕರನ್ನು ಹೊಡೆದುರುಳಿಸಿದ್ದಾರೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಸ್ತುತ, ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : Lakimpur Kheri Violence Updates : ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ – ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ಪ್ರಶ್ನೆ

ಮೃತರನ್ನು ಸಿಖ್ ಮತ್ತು ಕಾಶ್ಮೀರಿ ಪಂಡಿತ್ ಪ್ರಾಂಶುಪಾಲ ಸತೀಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ಇತ್ತಿಚೇಗೆ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂರು ಜನರ ಶೂಟ್‌ಔಟ್ ಪ್ರಕರಣ ಇನ್ನು ಹಸಿಯಾಗಿರುವಾಗಲೇ ಈ ಘಟನೆ ನಡೆದಿದ್ದು ಅಲ್ಲಿಯ ಸ್ಥಳಿಯರಲ್ಲಿ ಸುರಕ್ಷೆಯ ಕುರಿತು ಆತಂಕ ಮನೆ ಮಾಡಿದೆ.