ಲಕ್ನೌ : ಉತ್ತರ ಪ್ರದೇಶದ ಲಖೀಮ್‌ಪುರದಲ್ಲಿ ನಡೆದ ರೈತರ ಹತ್ಯಾಕಾಂಡದಲ್ಲಿ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್ ಮಿಶ್ರಾ ರವರ ಪುತ್ರ ಆಶಿಶ್ ಮಿಶ್ರಾ ಇದೀಗ ತಲೆ ಮರೆಸಿಕೊಂಡಿದ್ದು ಅವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆಗೆ ಸಂಭಂದಪಟ್ಟಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದು ಮೂರು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಉತ್ತರ ಪ್ರದೇಶ ಪೊಲೀಸರು ಆಶಿಶ್ ಮಿಶ್ರಾ ಮತ್ತು ಸಹಚರರನ್ನು ಭಾನುವಾರ ಅಪರಾಧದ ಸ್ಥಳದಿಂದ ತಪ್ಪಿಸಿಕೊಳ್ಳಲು ಮತ್ತು ಈಗ ಬಂಧನ ತಪ್ಪಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಯುಪಿ ಸರ್ಕಾರ, ಒಕ್ಕೂಟ ಸರ್ಕಾರ ಮತ್ತು ಭಾರತದ ರಾಷ್ಟ್ರಪತಿಗಳಿಂದ ಆಶಿಶ್ ಮಿಶ್ರಾ ಬಂಧನ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಜಾಗೊಳಿಸುವುದು ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಪದಚ್ಯುತಿಗಾಗಿ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ ಕಾಯುತ್ತಿದೆ ಎಂದಿದೆ.