ಲಕ್ನೌ : ಲಖಿಂಪುರ್ ಖೇರಿಗೆ ಹೋಗುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಬೆಂಗಾವಲನ್ನು ಯುಪಿ ಗಡಿಯ ಸಹಾರನ್ ಪುರದಲ್ಲಿ ನಿಲ್ಲಿಸಲಾಯಿತು. ಇದರಿಂದ ಕೋಪಗೊಂಡ ಕಾಂಗ್ರೆಸ್ಸಿಗರು ಯುಪಿ ಪೊಲೀಸರ ಮೊದಲ ಬ್ಯಾರಿಕೇಡ್ ಅನ್ನು ಮುರಿದರು. ಇದಾದ ನಂತರ, ಸಿಧು ಮತ್ತು ಆತನ ಜೊತೆಗಿದ್ದ ಮಂತ್ರಿಗಳಾದ ಅಮರಿಂದರ್ ಸಿಂಗ್ ರಾಜಾ ವಾಡಿಂಗ್, ವಿಜಯೇಂದ್ರ ಸಿಂಗ್ಲಾ, ಗುರ್ಕೀರತ್ ಕೋಟ್ಲಿ ಸೇರಿದಂತೆ ಹಲವು ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನ ಬಂಧನವನ್ನು ನಾಳೆ (ಶುಕ್ರವಾರದೊಳಗೆ) ಮಾಡದಿದ್ದರೆ, ಅವರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮೊಹಾಲಿಯಲ್ಲಿ ಸಿಧು ಹೇಳಿದ್ದರು. ಏತನ್ಮಧ್ಯೆ ಎಸ್ಪಿ ನಾಯಕ ಅಖಿಲೇಶ್ ಯಾದವ್ ಲಖಿಂಪುರ್ ತಲುಪಿ ಮೃತ ರೈತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳೀದ್ದಾರೆ.
ಇದನ್ನೂ ಓದಿ : ಈ ವಿಡಿಯೋ ಬಗ್ಗೆ ನಿಮಗೆ ಏನನಿಸುತ್ತದೆ, ಮಾನ್ಯ ಮೋದಿಯವರೆ? ಪ್ರಿಯಾಂಕಾ ಗಾಂಧಿ ನೇರ ಸವಾಲು

ಲಖಿಂಪುರ್ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳಾದ ಲುವ್ ಕುಶ್ ಮತ್ತು ಆಶಿಶ್ ಪಾಂಡೆಯನ್ನು ಬಂಧಿಸಿದ್ದಾರೆ. ಆಶಿಶ್ ಮಿಶ್ರಾ ಬಂಧನಕ್ಕಾಗಿ ಪೊಲೀಸ್ ಬಲೆ ಬೀಸಿದ್ದಾರೆ.
ಇದನ್ನೂ ಓದಿ : Haryana : ಬಿಜೆಪಿ ಸಂಸದರ ಕಾರು ಡಿಕ್ಕಿ ಹೊಡೆದು ರೈತ ಆಸ್ಪತ್ರೆಗೆ ದಾಖಲು – ಇದು ಕೊಲ್ಲುವ ಉದ್ದೇಶ ಎಂದು ರೈತರ ಆರೋಪ

ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ನಾಳೆಯೊಳಗೆ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ಇದರ ಜೊತೆ ಯಾರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಅವರನ್ನು ಬಂಧಿಸಲಾಗಿದೆಯೇ ಎಂದು ಸಹ ಕೇಳಲಾಗಿದೆ. ಆರೋಪ ಮಾಡಿದವರ ವಿರುದ್ಧ ಮಾಹಿತಿ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.