ಮಂಗಳೂರು : “ಬೀದಿ ರೌಡಿಗಳು ಹಿಡಿಯುವ ತಲವಾರನ್ನು ಕೋಟಿ ಚೆನ್ನಯರು ಹಿಡಿಯುತ್ತಿದ್ದರು” ಎನ್ನುವ ಮೂಲಕ ಚೈತ್ರ ಕುಂದಾಪುರ ಮತ್ತೊಂದು ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಸದಾ ಒಂದಿಲ್ಲೊಂದು ಕೋಮು ಸೌಹಾರ್ದತೆ ಮುರಿಯುವಂತಹ ಹೇಳಿಕೆಗಳನ್ನು ಕೊಡುತ್ತಿದ್ದ ಚೈತ್ರ ಕುಂದಾಪುರ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಈಗ ಈ ವಿಷಯಕ್ಕೆ ಸಂಭಂದಿಸಿ ಮತ್ತೊಂದು ಪ್ರಕರಣ ಚೈತ್ರ ಕುಂದಾಪುರ ವಿರುದ್ದ ದಾಖಲಾಗಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಐಟಿ ದಾಳಿಯ ಸುನಾಮಿ – ಏಕಕಾಲದಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ ಅಧಿಕಾರಿಗಳು

ಅಕ್ಟೋಬರ್ 5 ರಂದು ಬಜರಂಗದಳ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಚೈತ್ರ ಅವರು ಈ ಹೇಳಿಕೆ ನೀಡಿದ್ದು ಇವರ ವಿರುದ್ದ ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಎನ್ನುವವರು ದೂರು ಕೊಟ್ಟಿದ್ದಾರೆ. ಸುರತ್ಕಲ್ ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚೈತ್ರ ಕುಂದಾಪುರ ಮುಸ್ಲಿಮ್ ಸಮುದಾಯವನ್ನು ಅವಹೇಳನಾಕಾರಿಯಾಗಿ ಮಾತನಾಡಿದ್ದರು, ಅಲ್ಲದೇ ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಸಚಿವರೊಬ್ಬರ ಹೆಣ್ಣು ಮಗಳ ಬಗ್ಗೆಯೂ ಕೆಟ್ಟದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.