ಮುಂಬೈ : ಕಳೆದ ವಾರಾಂತ್ಯದಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ದಾಳಿಯ ನಂತರ ಬಂಧನಕ್ಕೊಳಗಾಗಿದ್ದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರಿಗೆ ಇಂದು ನಟ ಹೃತಿಕ್ ರೋಷನ್ ವಿಶೇಷ ನೋಟ್ ಒಂದನ್ನ ಪೋಸ್ಟ್ ಮಾಡಿದ್ದಾರೆ.
“ನಾನು ನಿನ್ನನ್ನು ಬಾಲ್ಯದದಿಂದಲೂ ನೋಡಿದ್ದೆನೆ ಮತ್ತು ಯುವಕನಾಗಿಯೂ ನೋಡಿದ್ದೆನೆ, ಈಗ ನೀನು ಅನುಭವಿಸುತ್ತಿರುವ ಪ್ರತಿಯೊಂದನ್ನು ನಿನ್ನ ಸ್ವಂತದ್ದಾಗಿ ತೆಗೆದುಕೋ, ಎಲ್ಲವನ್ನೂ ನಿನ್ನ ಜೀವನದ ಉಡುಗೊರೆ ಎಂದು ತಿಳಿ, ನನ್ನನ್ನು ನಂಬು. ಸಮಯದ ಈ ಚುಕ್ಕೆಗಳನ್ನು ಒಂದಕ್ಕೊಂದು ಸೇರಿಸಿದಾಗ ನಾನು ನಿನಗೆ ಭರವಸೆ ನೀಡುತ್ತೇನೆ, ಎಲ್ಲದಕ್ಕೂ ಅರ್ಥ ಬರುತ್ತದೆ, ಎಲ್ಲವೂ ಸರಿ ಹೋಗುತ್ತವೆ” ಎಂದು ಹೃತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆರ್ಯನ್ ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.