ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಮತ್ತು ಅದರ ಎರಡು ಅಂಗಸಂಸ್ಥೆಗಳಾದ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಸೇವೆಗಳು ಅಕ್ಟೋಬರ್ 4 ರಂದು ಸುಮಾರು ಏಳು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು. ವಾಸ್ತವವಾಗಿ ಫೇಸ್ಬುಕ್ ಸೇವೆಗಳಾಗಲಿ ಅಥವಾ ವಾಟ್ಸಾಪ್ ಸೇವೆಗಳಾಗಲಿ ಹತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲಲ್ಲ. ಪ್ರಪಂಚದಾದ್ಯಂತದ ಶತಕೋಟಿ ಬಳಕೆದಾರರು ಸುಮಾರು ಏಳು ಗಂಟೆಗಳ ಕಾಲ ಸೇವೆಗಳು ಸ್ಥಗಿತವಾಗಿದ್ದರಿಂದ ಗೊಂದಲಕ್ಕೊಳಗಾಗಿದ್ದರು. ಇಂತಹ ದೊಡ್ಡ ಸಾಮಾಜಿಕ ಮಾಧ್ಯಮ ತಾಣಗಳು ವಿಶ್ವಾದ್ಯಂತ ಇಷ್ಟೊಂದು ಗಂಟೆಗಳ ಕಾಲ ಏಕೆ ಸ್ಥಗಿತವಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ. ಇವತ್ತಿನ ಈ ಲೇಖನದಲ್ಲಿ ಅದರ ನಿಜವಾದ ಕಾರಣಗಳು ಏನೆಂದು ತಿಳಿದುಕೊಳ್ಳೊಣ ಬನ್ನಿ.

ಫೇಸ್ಬುಕ್ ಸೇವೆಗಳು ಏಕೆ ನಿಂತುಹೋದವು? ಸುಮಾರು ಏಳು ಗಂಟೆಗಳ ಕಾಲ ಫೇಸ್‌ಬುಕ್ ಸೇವೆಗಳನ್ನು ಸ್ಥಗಿತಗೊಳ್ಳಲು “ಫಾಲ್ಟಿ ಕಾನ್‌ಫ್ಯೂಗರೇಷನ್ ಚೇಂಜ್” ಕಾರಣವಾಗಿದೆ ಎಂದು ಫೇಸ್‌ಬುಕ್ ಸೋಮವಾರ ಬಹಿರಂಗಪಡಿಸಿದೆ. ಫೇಸ್‌ಬುಕ್‌ನ ಆಂತರಿಕ ಪರಿಕರಗಳು ಮತ್ತು ವ್ಯವಸ್ಥೆಗಳು ಸಹ ಕೆಲವೊಮ್ಮೆ ದೋಷಗಳಿಗೆ ಒಳಗಾಗುತ್ತವೆ, ಇದರಿಂದಾಗಿ ಸಮಸ್ಯೆಯನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ತುಂಬಾ ಕಷ್ಟವಾಗುತ್ತದೆ. ಇದು ಫೇಸ್ಬುಕ್ ಸೇರಿದಂತೆ ಅದರ ಅಂಗಸಂಸ್ಥೆಗಳ ಡೇಟಾ ಸೆಂಟರ್ ಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿಯೇ ನಮ್ಮ ಎಂಜಿನಿಯರಿಂಗ್ ತಂಡಗಳು ಎಲ್ಲಾ ಸೇವೆಗಳು ಸ್ಥಗಿತಗೊಂಡಿರುವುದನ್ನು ಕಂಡುಕೊಂಡರು ಎಂದು ಫೇಸ್ಬುಕ್ ಹೇಳಿದೆ.

ತಂತ್ರಜ್ಞರು ಈ ಹೇಳಿಕೆಯ ಬಗ್ಗೆ ಸ್ಪಷ್ಟ ವಿವರಣೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಡೊಮೈನ್ ನೇಮ್ ಸಿಸ್ಟಂ (DNS) ಸಾಮಾನ್ಯವಾಗಿ Facebook.com ನಂತಹ ಡೊಮೇನ್‌ಗಳನ್ನು IP ವಿಳಾಸಗಳಿಗೆ ಅನುವಾದಿಸುತ್ತದೆ. ನಂತರ ನೀವು ಇಂಟರ್ನೆಟ್ ಸಹಾಯದಿಂದ ಆ ಸೈಟ್ ಅನ್ನು ಪ್ರವೇಶಿಸಬಹುದು. ಡಿಎನ್ಎಸ್ ದಾಖಲೆಗಳು ಆ ಸೈಟ್ಗೆ ಲಭ್ಯವಿಲ್ಲದಿದ್ದರೆ ಸೈಟ್ಗೆ ಪ್ರವೇಶವನ್ನು ಪ್ರವೇಶಿಸಲಾಗುವುದಿಲ್ಲ. ಬಾರ್ಡರ್ ಗೇಟ್ ವೇ ಪ್ರೋಟೋಕಾಲ್ (ಬಿಜಿಪಿ) ದಾಖಲೆಗಳು ಕೂಡ ಮುಖ್ಯವಾಗಿವೆ. ಅಂತರ್ಜಾಲದಲ್ಲಿ ಸ್ವಾಯತ್ತ ವ್ಯವಸ್ಥೆಗಳ (AS) ನಡುವೆ ಮಾಹಿತಿಯನ್ನು ವರ್ಗಾಯಿಸಲು ಇದು ಮಾರ್ಗಗಳನ್ನು ಒದಗಿಸುತ್ತದೆ. ವೆಬ್‌ಸೈಟ್ ಸೇವೆಗಳ ನಿರಂತರ ಲಭ್ಯತೆಗೆ ಇವೆರಡೂ ಮುಖ್ಯ.

ಫೇಸ್‌ಬುಕ್ ಡೇಟಾ ಕೇಂದ್ರಗಳಿಂದ ಯಾರೋ ಒಬ್ಬರು ಕೇಬಲ್‌ಗಳನ್ನು ಒಮ್ಮೆ ಎಳೆದು ಅದನ್ನು ಇಂಟರ್‌ನೆಟ್‌ನಿಂದ ಸಂಪರ್ಕ ಕಡಿತಗೊಳಿಸಿದಂತಿದೆ ಎಂದು ವೆಬ್ ಮೂಲಸೌಕರ್ಯ ಮತ್ತು ವೆಬ್ ಸೆಕ್ಯುರಿಟಿ ಕಂಪನಿ ‘ಕ್ಲೌಡ್‌ಫ್ಲೇರ್’ ನ ಇಬ್ಬರು ಹಿರಿಯ ಎಂಜಿನಿಯರ್‌ಗಳು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದರು. ಅವರ ಪ್ರಕಾರ, ಬಾರ್ಡರ್ ಗೇಟ್ ವೇ ಪ್ರೋಟೋಕಾಲ್ (ಬಿಜಿಪಿ) ಮೂಲಕ ಫೇಸ್ಬುಕ್ ತನ್ನ ಡಿಎನ್ಎಸ್ ಸರ್ವರ್ಗೆ ಮಾರ್ಗಗಳನ್ನು ಸಂವಹನ ಮಾಡುವುದನ್ನು ನಿಲ್ಲಿಸಿದೆ.