ತಾಂತ್ರಿಕ ಕಾರಣಗಳಿಂದ ನೆನ್ನೆ ರಾತ್ರಿ ಸರಿ ಸುಮಾರು ಏಳು ಘಂಟೆಗಳ ಕಾಲ ಸೋಶಿಯಲ್ ಮೀಡಿಯಾ ಜಗತ್ತು ಸ್ತಬ್ದವಾಗಿತ್ತು. ಕೋಟ್ಯಂತರ ಬಳಕೆದಾರರನ್ನು ಹೊಂದಿದ ವಿಶ್ವದ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ ಬುಕ್ ಸೇರಿದಂತೆ ಅದರ ಒಡೆತನದ ಇನ್ಸ್ಟಾಗ್ರಾಮ್ ಮತ್ತು ವಾಟ್ಸಪ್ಪ್ ಕೂಡ ಔಟ್ರೇಜ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದವು. ಈ ಬಗ್ಗೆ ಇಂದು ಮುಂಜಾನೆ ಸ್ಪಷ್ಟನೆ ಕೊಟ್ಟ ಮಾರ್ಕ್ ಜುಕರ್‌ಬಗ್ ವೀ ಆರ್ ಬ್ಯಾಕ್ ಎಂದು ಹೇಳಿಕೊಂಡಿದ್ದಾರೆ.

ಈ ಒಂದು ಘಟನೆಯಿಂದ ಮಾರ್ಕ್ ಗೆ ಬರೋಬ್ಬರಿ $ 7 ಬಿಲಿಯನ್ ನಷ್ಟವಾಗಿದೆ ಎಂದು ಹೇಳಲಾಗಿದೆ. ಈ ತರಹದ ಸಮಸ್ಯೆ ಈ ಹಿಂದೆಯೂ ಅನೇಕ ಬಾರಿ ಎದುರಾಗಿತ್ತು. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ 9:15 ರ ಸುಮಾರಿಗೆ ವಿಶ್ವದಾದ್ಯಂತ ಫೇಸ್‌ಬುಕ್ ಸೇವೆಗಳು ಸ್ಥಗಿತಗೊಂಡಿವೆ. ಫೇಸ್ಬುಕ್ ಸೇವೆಗಳ ಜೊತೆಗೆ, Instagram, WhatsApp ಸುಮಾರು 7 ಗಂಟೆಗಳ ಕಾಲ ಸ್ಥಗಿತಗೊಂಡ ನಂತರ, ಈ ಆಪ್‌ಗಳು ಭಾಗಶಃ ಮತ್ತೆ ಕೆಲಸ ಮಾಡಲು ಆರಂಭಿಸಿದವು. ಇದು ಕೋಟ್ಯಾಂತರ ಬಳಕೆದಾರರಿಗೆ ಕೆಲಕಾಲ ಸಮಸ್ಯೆ ಸೃಷ್ಟಿಸಿತು. ಸೋಮವಾರ ರಾತ್ರಿ 9.15 ಕ್ಕೆ ಈ ವಿಷಯ ಮುನ್ನೆಲೆಗೆ ಬಂದಿದ್ದು, ಸ್ವಲ್ಪ ಸಮಯದ ನಂತರ, ಜನರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಲು ಪ್ರಾರಂಭಿಸಿದರು.
ಈ ಕುರಿತು ಪೋಸ್ಟ್ ಮಾಡಿದ ಮಾರ್ಕ್ “ಅಡ್ಡಿಪಡಿಸಿದ್ದಕ್ಕಾಗಿ ಕ್ಷಮಿಸಿ, ನೀವು ಕಾಳಜಿವಹಿಸುವ ಜನರೊಂದಿಗೆ ಸಂಪರ್ಕ ಹೊಂದಲು ನಮ್ಮ ಸೇವೆಗಳನ್ನು ನೀವು ಎಷ್ಟು ನಂಬುತ್ತೀರಿ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಡಾಲರ್‌ನ ನಿವ್ವಳ ಮೌಲ್ಯದ ಪ್ರಕಾರ ಮಾರ್ಕ್ ಜುಕರ್‌ಬಗ್ ಸಂಪತ್ತು 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬಿಲಿಯನೇರ್‌ಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಅದಕ್ಕೂ ಮೊದಲು ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಈ ವರ್ಷ ಸೆಪ್ಟೆಂಬರ್ 13 ರಿಂದ, ಅವರ ನಿವ್ವಳ ಮೌಲ್ಯವು $ 19 ಬಿಲಿಯನ್ ನಷ್ಟು ಕುಸಿದಿದೆ.
ಇದನ್ನೂ ಓದಿ : ಕೊನೆಗೂ ಬಯಲಾಯಿತು ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಐರಿನಾ ಶಾಯಿಕ್ ನಡುವೆ ಬ್ರೇಕ್ ಅಪ್ ನ ಕಾರಣ
ಈ ಅಡಚಣೆಯ ಪರಿಣಾಮ ಯುಎಸ್ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಷೇರುಗಳ ಮೇಲೂ ಪರಿಣಾಮ ಬೀರಿದೆ ಮತ್ತು ಕಂಪನಿಯ ಷೇರುಗಳು ಶೇ 6 % ಕುಸಿದಿವೆ. ಫೇಸ್ಬುಕ್ ವಿಶ್ವಾದ್ಯಂತ 2.85 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಪ್ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು Instagram 1.38 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ತಾಂತ್ರಿಕ ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಫೇಸ್ ಬುಕ್ ಹೇಳಿದ್ದು ಇಲ್ಲಿಯವರೆಗೆ ನಿಜವಾಗಿ ಏನಾಯಿತು ಎಂಬುದರ ಕುರಿತು ಫೇಸ್ಬುಕ್ ಸರಿಯಾದ ವಿವರಣೆಯನ್ನು ನೀಡಿಲ್ಲ. ಆದರೆ ಏಳು ಗಂಟೆಗಳ ವಿರಾಮದ ನಂತರ, ಫೇಸ್‌ಬುಕ್ ಎಂದಿನಂತೆ ಕಾರ್ಯಾಚರಣೆಯನ್ನು ಪುನರಾರಂಭಿಸಿತು. ಈ ಸಮಸ್ಯೆಯನ್ನು ಈಗಾಗಲೇ ವಿಶ್ವದಾದ್ಯಂತ ಫೇಸ್‌ಬುಕ್‌ನಲ್ಲಿ ಟೀಕಿಸಲಾಗಿದೆ.