ಪ್ರತಿವರ್ಷ ಕಿರುತೆರೆಯ ಅಭಿಮಾನಿಗಳು ಬಹಳ ಕಾತುರದಿಂದ ಕಾಯುವ ಒಂದು ದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಇನ್ನೆನು ಶುರುವಾಗಿದೆ, ಕೇವಲ ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ ಎಂದು ತಿಳಿಯುವುದು ಮಾತ್ರವಲ್ಲದೆ ಈ ಸಲದ ಥೀಮ್ ಏನಿರಲಿದೆ ಎಂಬ ಕುತೂಹಲವೂ ಸಹಜವಾಗಿಯೇ ಇರುತ್ತದೆ. ಒಂದು ತಿಂಗಳ ಹಿಂದೆ, ಸಲ್ಮಾನ್ ಖಾನ್ ಅವರು ಈ ಸೀಸನ್ ನಲ್ಲಿ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ಕಾಡಿನಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂದು ಘೋಷಿಸಿದರು. ಪ್ರತಿ ಸ್ಪರ್ಧಿಗಳ ಪ್ರಯಾಣವು ಎರಡು ಭಾಗಗಳನ್ನು ಹೊಂದಿರುತ್ತದೆ – ಅವರು ಭವ್ಯವಾದ ಅರಮನೆಯ ವಾಸ ಪಡೆಯಲು ಮೊದಲು ಕಾಡಿನ ಮೂಲಕ ಪ್ರಯಾಣಿಸಿ ಅನೇಕ ಸವಾಲುಗಳನ್ನು ದಾಟಬೇಕಾಗುತ್ತದೆ.

ಒಮುಂಗ್ ಕುಮಾರ್ ಮತ್ತು ವನಿತಾ ಕುಮಾರ್ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಅರಣ್ಯದ ಮನೆಯೂ ಬಹಳ ಶಾಂತಿಯುತವಾಗಿದೆ ಆದರೆ ಸ್ಪರ್ಧಿಗಳ ಜೀವನದಲ್ಲಿ ಅನೇಕ ತೊಂದರೆ ಉಂಟುಮಾಡುವ ಹಲವಾರು ರಹಸ್ಯಗಳನ್ನು ಈ ಮನೆ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಬಿಗ್ ಬಾಸ್ ಮನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಇದು ಒಂದು ಐಷಾರಾಮಿ ಸ್ಥಳವಾಗಿದ್ದು ನಮ್ಮ ಕಲ್ಪನಾ ಸಾಮರ್ಥ್ಯವನ್ನು ಮೀರಿ ಸುಂದರವಾಗಿದೆ.

ಕಾಡಿನ ವಿಷಯದ ಥೀಮ್ ಹೊಂದಿರುವ ಬಿಗ್ ಬಾಸ್ 15 ಮನೆಯಿಂದ ಆರಂಭಗೊಂಡು ಗಾರ್ಡನ್ ಏರಿಯಾ ವರೆಗೂ ಒಂದು ಸೊಂಪಾದ ಅರಣ್ಯವಾಗಿ ಮಾರ್ಪಟ್ಟಿದೆ. ಹಚ್ಚ ಹಸಿರಿನ ಮರಗಳು ಮತ್ತು ಅಲಂಕಾರಿಕ ಸಸ್ಯವರ್ಗದ ಜೊತೆಗೆ ‘ಖುಫಿಯಾ ದರ್ವಾಜಾ’ ಕೂಡ ಇದೆ. ಸ್ವಿಮ್ಮಿಂಗ್ ಪೂಲ್ ಈಗ ಹೂಗಳು ಮತ್ತು ಗಿಡಗಳನ್ನು ಅಲಂಕರಿಸಿದ ಕೊಳದಂತೆ ಕಾಣುತ್ತಿದೆ. ಗಾರ್ಡನ್ ಏರಿಯಾದಲ್ಲಿರುವ ವಿಶ್ವ ಸುಂದರಿ ಮರವೂ ಕಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದರೊಂದಿಗೆ ಇದೊಂದು ಮಾತನಾಡುವ ಮರ ಎಂತಲೇ ಖ್ಯಾತಿಯಾಗಿದೆ. ಕಾಡಿನ ಹೃದಯಭಾಗದಲ್ಲಿ ಸರಿಯಾಗಿ ನಿಂತ ಈ ಮರ ಸ್ಪರ್ಧಿಗಳನ್ನು ಪ್ರಲೋಭಿಸಲು, ಸೆಳೆಯಲು ಮತ್ತು ಅವರ ಆಟವನ್ನು ಕುಶಲತೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತದೆ.

ಅರಣ್ಯವನ್ನು ಪ್ರದೇಶದ ಮಾದರಿಯನ್ನ ಸ್ಪರ್ದಿಗಳು ವಾಸಿಸುವ ಪ್ರದೇಶಕ್ಕೂ ವಿಸ್ತರಿಸಲಾಗಿದೆ, ಇದು ಮಲಗುವ ಕೋಣೆಯನ್ನೂ ಸಹ ಒಳಗೊಂಡಿದೆ. ಓಪನ್ ಕಿಚನ್ ಪ್ರದೇಶವು ಸ್ಪರ್ಧಿಗಳ ಕೆಲವು ನಾಟಕೀಯ ವರ್ತನೆಗಳಿಗೆ ಸಾಕ್ಷಿಯಾಗಲಿದೆ. ಕಾಡಿನ ಥೀಮ್‌ನಲ್ಲಿ ಸರಿಯಾದ ಕಾಡಿನ ರಾಜನಿಗೆ ಕಿರೀಟಧಾರಣೆ ಮಾಡುವುದು ಅವಶ್ಯಕವಾಗಿದೆ ಮತ್ತು ನಾವು ಅತ್ಯುತ್ತಮ ಸ್ಪರ್ಧಿಗಳನ್ನು ಈ ರೇಸ್‌ನಲ್ಲಿ ಕಾಣಬಹುದು. ಕನ್‌ಫೇಶನ್ ರೂಂನಲ್ಲಿ ಬೆಲೆಬಾಳುವ ಪೀಠೋಪಕರಣಗಳೊಂದಿಗೆ ನೇರಳೆ ಮತ್ತು ಮರೂನ್ ಬಣ್ಣಗಳಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. ದೊಡ್ಡ ಗಾತ್ರದ ಕಿರೀಟದಿಂದ ಆವೃತವಾದ ಈ ಕೋಣೆಯು ಎಲ್ಲಾ ನಾಮೀನೇಶನ್ ಪ್ರಕ್ರಿಯೆಗಳನ್ನು ಮತ್ತು ಇನ್ನು ಅನೇಕ ರಹಸ್ಯಗಳನ್ನು ನೋಡುತ್ತದೆ.

ಬಂಗಾರದ ಹಳದಿ ಥೀಮ್‌ನೊಂದಿಗೆ ಮಲಗುವ ಕೋಣೆ ಪ್ರದೇಶವು ಒಂದು ಒಳ್ಳೆಯ ವೈಬ್ ಅನ್ನು ಪಡೆಯುತ್ತದೆ, ಲೀವಿಂಗ್ ಏರಿಯಾ ಮರೂನ್ ಸೋಫಾಗಳೊಂದಿಗೆ ಬಹಳ ಐಷಾರಾಮಿಯಾಗಿದೆ. ಅಲ್ಲಿ ಕುಳಿತು ಸ್ಪರ್ಧಿಗಳು ಟಿವಿ ಮೂಲಕ ಹೋಸ್ಟ್ ಸಲ್ಮಾನ್ ಖಾನ್ ಅವರೊಂದಿಗೆ ಸಂವಹನ ನಡೆಸುತ್ತಾರೆ.

ಕಾಡಿನಲ್ಲಿ ಬದುಕುಳಿಯುವ ಹೋರಾಟದ ನಂತರ, ಸ್ಪರ್ಧಿಗಳು ಸಮೃದ್ಧಿಯ ಸ್ವರ್ಗಕ್ಕೆ ಪ್ರವೇಶಿಸುತ್ತಾರೆ. ಭವ್ಯವಾದ ಪ್ರಾಣಿ ಮಾದರಿಗಳು, ಮುದ್ರಣಗಳು, ವರ್ಣಚಿತ್ರಗಳು ಮತ್ತು ಹೂವಿನ ವಾಲ್‌ಪೇಪರ್‌ಗಳಿಂದ ಮನೆಯ ಈ ದೃಶ್ಯದಲ್ಲಿ ಸ್ಪರ್ಧಿಗಳು ಮತ್ತು ವೀಕ್ಷಕರನ್ನು ಸ್ವಾಗತಿಸಲಾಗುತ್ತದೆ. ಈ ಕಾರ್ಯಕ್ರಮವು ಅನೇಕ ಜನರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತದೆ ಎಂದು ಊಹಿಸಲಾಗಿದೆ ಮತ್ತು ಈ ಸಮಯದಲ್ಲಿ ಯಾರು ಜನರ ಹೃದಯಗಳನ್ನು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಕಲಾ ನಿರ್ದೇಶಕ ಒಮುಂಗ್ ಕುಮಾರ್ ಮತ್ತು ನಿರ್ಮಾಣ ವಿನ್ಯಾಸಕಿ ವನಿತಾ ಒಮುಂಗ್ ಕುಮಾರ್ ಪ್ರತಿ ವರ್ಷ ಬಿಗ್ ಬಾಸ್ ಮನೆಯನ್ನು ವಿನ್ಯಾಸಗೊಳಿಸುವುದು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ ಎಂದಿದ್ದಾರೆ. ಸ್ಪರ್ಧಿಗಳನ್ನು ತಿಂಗಳುಗಳ ಕಾಲ ಕಟ್ಟುನಿಟ್ಟಾದ ಕಣ್ಗಾವಲಿನಲ್ಲಿ ಇರಿಸಲಾಗಿರುವ ಸ್ಥಳವನ್ನು ನೀಡಿದರೆ ಅದೂ ಐಷಾರಾಮಿಯೂ ಆಗಿರಬೇಕು ಮತ್ತು ಕಷ್ಟಗಳ ಸಂಯೋಜನೆಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಈ ಸೀಸನ್‌ನಲ್ಲಿ ಮನೆಯು ಕಾಡಾಗಿರಬೇಕು ಮತ್ತು ಮನೆಯ ಪ್ರತಿಯೊಂದು ಮೂಲೆಯಲ್ಲೂ ನಾವು ಅದಕ್ಕೆ ಜೀವ ತರಬೇಕಾಗಿತ್ತು. ಆದ್ದರಿಂದ, ಗಾರ್ಡನ್ ಏರಿಯಾ ಸಾಕಷ್ಟು ಹಸಿರು ಹೂವುಗಳು, ಹ್ಯಾಂಗಿಂಗ್ಸ್ ಮತ್ತು ಮರದ ತೊಗಟೆಗಳೊಂದಿಗೆ ಕಾಡಾಗಿ ಬದಲಾಗಿರುವುದನ್ನು ನೀವು ಕಾಣುಬಹುದು, ನೀವು ಕಾಡಿನ ಪ್ರತಿಬಿಂಬವನ್ನು ಮತ್ತು ಮನೆಯೊಳಗೆ ಪ್ರಾಣಿಗಳನ್ನೂ ನೋಡುತ್ತೀರಿ. ಹೂವಿನ ಅಲಂಕಾರಿಕ ವಸ್ತುಗಳು, ಪ್ರಾಣಿಗಳ ರಚನೆಗಳು, ಬೃಹತ್ ರೆಕ್ಕೆಗಳು ಮನೆಗೆ ಅತಿವಾಸ್ತವಿಕವಾದ ಕಂಪನ್ನು ನೀಡುತ್ತವೆ, ಇದು ಕೆಲವೊಮ್ಮೆ ಹೌಸ್‌ಮೇಟ್‌ಗಳಿಗೆ ಸಾಂತ್ವನ ನೀಡುತ್ತದೆ ಮತ್ತು ಕೆಲವೊಮ್ಮೆ ಆಟ ಆಡಿಸುತ್ತದೆ. ಈ ಮನೆಯನ್ನು ಬಹಳ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಹಾಗೂ ಸ್ಪರ್ಧಿಗಳಾಗಲಿ ಅಥವಾ ವೀಕ್ಷಕರಾಗಲಿ ಇದನ್ನು ಬಹಳ ಇಷ್ಟಪಡುತ್ತಾರೆ ಎಂದು ನಾವು ಭಾವಿಸುತ್ತೇನೆ ಎಂದು ಒಮುಂಗ್ ಮತ್ತು ವನಿತಾ ಹೇಳಿದರು.