ಮುಂಬೈ : ಕರಾವಳಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈಗಾಗಲೇ ಈ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು ಎಂಟು ಜನರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಎನ್‌ಸಿಬಿ ಬಲೆಯಲ್ಲಿರುವ ಆರ್ಯನ್ ಖಾನ್ ಕೆಲವು ಅಘಾತಕಾರಿ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆರ್ಯನ್ ಕಳೆದ ನಾಲ್ಕು ವರ್ಷಗಳಿಂದ ಡ್ರಗ್ಸ್ ಸೇವಿತ್ತಿದ್ದುದರ ಬಗ್ಗೆ ಎನ್‌ಸಿಬಿ ಬಳಿ ಹೇಳಿಕೆ ಕೊಟ್ಟಿದ್ದಾನೆ. ಯುಕೆ, ದುಬೈ ಮತ್ತು ಇತರ ದೇಶಗಳಲ್ಲಿದ್ದಾಗಲೂ ಡ್ರಗ್ಸ್ ಸೇವಿಸುತ್ತಿದ್ದುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ.

ಇನ್ನು, ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಶಾರುಖ್ ಖಾನ್‌ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಭೇಟಿ ನೀಡಿ ಸಂತ್ವಾನ ಹೇಳಿದ್ದಾರೆ. ಅಲ್ಲದೆ, ಇಂದು ಬೆಳಗ್ಗೆ ಶಾರುಖ್ ಖಾನ್ ತನ್ನ ಮಗನನ್ನು ಭೇಟಿ ಮಾಡಿ ಎರಡು ನಿಮಿಷಗಳ ಕಾಲ ಮಾತನಾಡಿ ಅಲ್ಲಿನ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.
ಇದನ್ನೂ ಓದಿ : ಡ್ರಗ್ಸ್ ಸುಳಿಯಲ್ಲಿ ಬಿದ್ದ ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಪುತ್ರ ಆರ್ಯನ್
ಆರ್ಯನ್ ಎನ್‌ಸಿಬಿ ಕಸ್ಟಡಿ ಇಂದಿಗೆ ಕೊನೆಗೊಳ್ಳುತ್ತದೆ. ವಿಚಾರಣೆ ವೇಳೆ ಆರ್ಯನ್ ಕಣ್ಣೀರಿಡುವುದು ಮುಂದುವರೆದಿದೆ ಎಂಬ ಮಾಹಿತಿ ಇದೆ.