ಉತ್ತರಪ್ರದೇಶ: ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಮುಂದೊಂದು ದಿನ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮುನ್ನಡೆಸುತ್ತಾರೆ ಎಂಬ ಊಹಾಪೋಹಗಳು ಶೀಘ್ರದಲ್ಲೇ ನಿಜವಾಗುವಂತಿದೆ. ಇದೆಕ್ಕೆ ಪುಷ್ಟಿ ನೀಡುವಂತಿದೆ ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ.
ಹೌದು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ರೈತರ ಬೆಂಬಲಕ್ಕೆ ನಿಂತ ಆಕೆಯ ನಡೆ, ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ತೆಗೆದುಕೊಂಡಾಗ ನಡೆದಕೊಂಡ ರೀತಿ, ಆಕೆ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿತ್ರವನ್ನು ನೆನೆಪಿಸುವಂತಿದೆ. ವಿಶೇಷ ಅಂದ್ರೆ, 44 ವರ್ಷಗಳ ಹಿಂದೆ, ಇದೇ ದಿನ ಅಜ್ಜಿ ಇಂದಿರಾ ಅವರು ಸಹ ಇದೇ ರೀತಿಯಾದ ಬಂಧನದ ಸನ್ನಿವೇಶವನ್ನು ಎದುರಿಸಿದ್ದರು.
जब नाश मनुज पर छाता है,
— Congress (@INCIndia) October 4, 2021
पहले विवेक मर जाता है।।
राज्यसभा सांसद @deependerSHooda के साथ ये बर्ताव भाजपाई की कायरता का प्रतीक है और @priyankagandhi जी का डटकर खड़े हो जाना साहस का।
विजय साहस की होगी।#PriyankaGandhiwithFarmers#लखीमपुर_किसान_नरसंहार pic.twitter.com/OXtpuu2JE1
ಯುಪಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೆಚ್ಚು ಚರ್ಚೆಯಲ್ಲಿದ್ದಾರೆ. ಈ ಹಿಂದೆ ಯೋಗಿ ಸರ್ಕಾರದ ವಿವಿಧ ಬೆಳವಣಿಗೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ, ನಿನ್ನೆ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನ ಕಾರು, ರೈತರ ಮೇಲೆ ಹರಿದು ನಾಲ್ಕು ಜನರನ್ನು ಬಲಿ ಪಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
प्रियंका, मैं जानता हूँ तुम पीछे नहीं हटोगी- तुम्हारी हिम्मत से वे डर गए हैं।
— Rahul Gandhi (@RahulGandhi) October 4, 2021
न्याय की इस अहिंसक लड़ाई में हम देश के अन्नदाता को जिता कर रहेंगे। #NoFear #लखीमपुर_किसान_नरसंहार
ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ತಡೆದಿದ್ದಾರೆ.ಈ ಸಮಯದಲ್ಲಿ ಪ್ರಿಯಾಂಕಾ ಪೊಲಿಸರು ಹಾಗೂ ಸರ್ಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಎಚ್ಚರಿಕೆ ನೀಡಿದ ಪ್ರಿಯಾಂಕಾ!
ಪ್ರಿಯಾಂಕಾ ತನ್ನನ್ನು ಬಂಧಿಸಲು ಯತ್ನಿಸಿದ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನೀವು ನನ್ನನ್ನು ಬಂಧಿಸಲು ಪ್ರಯತ್ನಿಸಿದರೆ ಅದು ದೈಹಿಕ ಹಲ್ಲೆ, ಅಪಹರಣ, ಕಿರುಕುಳಕ್ಕೆ ಬರುತ್ತದೆ. ನೀವು ಹೋಗಿ ನಿಮ್ಮ ಅಧಿಕಾರಿಗಳು ಮತ್ತು ಮಂತ್ರಿಗಳಿಂದ ವಾರಂಟ್ ಪಡೆಯಿರಿ ಎಂದು ಪ್ರಿಯಾಂಕಾ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಿರಿ. ನಿಮ್ಮ ರಾಜ್ಯದಲ್ಲಿ ಯಾವುದೇ ಕಾನೂನು ಇಲ್ಲದಿದ್ದರೂ ಈ ದೇಶದಲ್ಲಿ ಕಾನೂನು ಜಾರಿಯಲ್ಲಿದೆ. ನೀವು ನನ್ನನ್ನು ಬಲವಂತವಾಗಿ ಸ್ಥಳಾಂತರಿಸುತ್ತಿದ್ದೀರಿ ಎಂದು ಪ್ರಿಯಾಂಕಾ ಪೊಲೀಸರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾರ ಈ ಅಬ್ಬರಕ್ಕೆ ಕೆಲಕಾಲ ಪೊಲೀಸರು ನಿಶ್ಯಬವಾಗಿದ್ದರು.
If arrest of Mrs Indira Gandhi on October 3,1977 proved to be the undoing of Janta Party’s govt , the arrest of Priyanka Gandhi on October 3,2021 marks the beginning of the end of BJP govt. @INCIndia #FarmerProtest pic.twitter.com/GT27FUVcuT
— Sunil Jakhar (@sunilkjakhar) October 4, 2021
ಅಜ್ಜಿ ಇಂದಿರಾಳಂತೆ ಗರ್ಜಿಸಿದ ಪ್ರಿಯಾಂಕ
ಹಲವಾರು ಜನ ವಿಶ್ಲೇಷಕರು ಪ್ರಿಯಾಂಕಾರವರ ಹಾವಭಾವ ಹಾಗೂ ನಡವಳಿಕೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಪ್ರಿಯಾಂಕಾ ಪೊಲೀಸರ ಮೇಲೆ ಕೋಪಗೊಂಡಿದ್ದಾಗ, ಆಕೆಯ ಸಹೋದ್ಯೋಗಿಗಳು ಆಕೆಯ ಮುಖಭಾವ ಮತ್ತು ಚೂಪಾದ ಮಾತುಗಳನ್ನು ಗಮನಿಸಿ, ಆಕೆ ಅಜ್ಜಿ ಇಂದಿರಾಳಂತೆ ಗರ್ಜಿಸುತ್ತಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಸೆರೆಹಿಡಿದಿರುವ ಪ್ರಿಯಾಂಕಾ ಕೋಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

44 ವರ್ಷಗಳ ಹಿಂದೆ ಇದೇ ದಿನ ಇಂದಿರಾ ಅವರನ್ನೂ ಬಂಧಿಸಲಾಗಿತ್ತು
ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿಯ ಬಂಧನವನ್ನು 1977 ರಲ್ಲಿ ಜನತಾ ಸರ್ಕಾರದ ಅವಧಿಯಲ್ಲಿ ಇಂದಿರಾ ಗಾಂಧಿಯವರ ಬಂಧನಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಸುನೀಲ್ ಜಖಾದ್ ಅವರು, ಇಂದಿರಾ ಗಾಂಧಿಯನ್ನು ಅಕ್ಟೋಬರ್ 3, 1977 ರಂದು ಬಂಧಿಸಿದ ಜನತಾ ಸರ್ಕಾರವನ್ನು ವಿಸರ್ಜಿಸಲಾಗಿದೆ. ಈಗ ಪ್ರಿಯಾಂಕಾ ಗಾಂಧಿಯನ್ನು ಅಕ್ಟೋಬರ್ 3 ರಂದು ಬಂಧಿಸಿರುವುದರಿಂದ ಇತಿಹಾಸ ಮರುಕಳಿಸಲಿದೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಬೀವಿ ಶ್ರೀನಿವಾಸ್, ಇಂದಿರಾ ಮರಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಪ್ರತಿಕ್ರಿಯಿಸಿ. ನನಗೆ ಪ್ರಿಯಾಂಕಾ ಗೊತ್ತು, ನೀವು ಹಿಂದೆ ಸರಿಯುವುದಿಲ್ಲ. “ಈ ಅಹಿಂಸಾತ್ಮಕ ಹೋರಾಟದ ಮೂಲಕ, ನಾವು ಈ ದೇಶದ ಅನ್ನದಾತರನ್ನು ಗೆಲ್ಲಲಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.