ಮುಂಬೈ: ಬಾಲಿವುಡ ಸ್ಟಾರ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರು ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಮಾಹಿತಿ ಲಭ್ಯವಾಗಿದೆ.
ಮುಂಬೈನ ಐಷಾರಾಮಿ ಹಡುಗಿನ ಮೇಲೆ ಎನ್‌ಸಿಬಿ ದಾಳಿ ಮಾಡಿದೆ, ಅಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂಬ ಸುಳಿವು ಸಿಕ್ಕಿದೆ. ಈ ವೇಳೆ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ೧೦ಕ್ಕೂ ಹೆಚ್ಚು ಜನರನ್ನು ಅಧಿಕಾರಿಗಳು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ಮಾಡುತ್ತಿರುವ ಬಗ್ಗೆ ವರದಿ ಆಗಿದೆ. ಈ ಸುದ್ದಿಯಿಂದ ಶಾರುಖ್ ಖಾನ್ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ.

ಸದ್ಯ ಎನ್‌ಸಿಬಿ ವಶದಲ್ಲಿರುವ ಶಾರುಖ್ ಖಾನ್ ಪುತ್ರ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಆರ್ಯನ್ ಖಾನ್‌ರ ಮೊಬೈಲ್ ಫೋನ್ ಸಹ ವಶಕ್ಕೆ ಪಡೆಯಲಾಗಿದ್ದು, ಮೊಬೈಲ್ ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆರ್ಯನ್ ಜೊತೆಗೆ ಅಧಿಕಾರಿಗಳ ವಶದಲ್ಲಿರುವ ಎಲ್ಲರ ಫೋನ್‌ಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಂಡಿದೆ. ಈ ಪಾರ್ಟಿ ಆಯೋಜನೆ ಮಾಡಿದ ಆರು ಮಂದಿಗೂ ಕೂಡ ನೋಟಿಸ್ ನೀಡಲಾಗಿದೆ. ಈ ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಆಗಮಿಸಿದ್ದ ಮೂವರು ಯುವತಿಯರನ್ನು ಸಹ ವಶಕ್ಕೆ ಪಡೆಯಲಾಗಿದೆ.