ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆ ಸ್ತಬ್ದವಾಗಿದ್ದ ಚಿತ್ರಮಂದಿರ (Film Theatres) ಗಳು ಇಂದಿನಿಂದ ಶೇ.100ರಷ್ಟು ಸೀಟು ಭರ್ತಿ ಅನುಮತಿ ಹಿನ್ನಲೆ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿವೆ. ನಗರದ ಥಿಯೇಟರ್ ಗಳು ಮೊದಲಿನ ಸಂಭ್ರಮಕ್ಕೆ ಕಾಯುತ್ತಿವೆ.

ಹೌದು ಇಂದಿನಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕಿದೆ. ಶೇ.100ರಷ್ಟು ವೀಕ್ಷಕರ ಅನಮುತಿ ಸಿಕ್ಕಬೆನ್ನಲ್ಲೇ ಇಂದು ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸಹಾಗೂ ಚಂದ್ರಹಾಸ ನಿರ್ದೇಶನದ ಕಾಗೆಮೊಟ್ಟೆಚಿತ್ರಗಳು ಬಿಡುಗಡೆಯಾಗಿವೆ. ಈ ಎರಡು ಚಿತ್ರಗಳು ಒಟ್ಟು 200ಕ್ಕೂ ಹೆಚ್ಚು ಚಿತ್ರಮಂದಿರ(Film Theatres)ಗಳಲ್ಲಿ ಬಿಡುಗಡೆಯಾಗುತ್ತಿರೋದು ಅಭಿಮಾನಿಗಳಿಗೆ ಹಬ್ಬವಾಗಿದೆ.
ಅನುಮತಿ ಬೆನ್ನಲ್ಲೇ ರಾಜ್ಯದಲ್ಲಿರುವ 630 ಸಿಂಗಲ್ ಸ್ಕ್ರೀನ್ ಹಾಗೂ 60 ಮಲ್ಟಿಪ್ಲೆಕ್‌ಸ್ ಚಿತ್ರಮಂದಿರಗಳು ಸಿನಿಮಾಗಳ ಪ್ರದರ್ಶನಕ್ಕೆ ಸಜ್ಜಾಗಿವೆ. ಕೋವಿಡ್ ಹಿನ್ನಲೆ ಇಷ್ಟು ದಿನ ಚಿತ್ರಮಂದಿರಗಳಲ್ಲಿ ಶೇ 50% ಮಾತ್ರ ಅವಕಾಶ ನೀಡಲಾಗಿತ್ತು
ಇನ್ನೂ ಇದೇ 14ರಂದು ಇಬ್ಬರೂ ಸ್ಟಾರ್ ನಟರ ಚಿತ್ರಗಳು ಕೂಡ ತೆರೆ ಕಾಣ್ತಿವೆ.