ನವದೆಹಲಿ : ಬೀಜಿಂಗ್‌ನಲ್ಲಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ಪ್ರಧಾನ ಕಚೇರಿಯಲ್ಲಿ ಪಾಕ್ ಸೈನಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಭಾರತದ ಗುಪ್ತಚರ ಇಲಾಖೆ ಹೇಳಿದೆ. ಭಾರತದ ವಿರುದ್ಧ ಸಂಚು ರೂಪಿಸಿರುವ ಉಭಯ ದೇಶಗಳು ಒಟ್ಟಾಗಿ ಕಾರ್ಯಚರಣೆ ಮಾಡುತ್ತಿವೆ ಎಂದು ಅದು ಹೇಳಿದೆ.

ಮಾಹಿತಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ಚೀನಾದ ಸೇನೆಯ ಪಶ್ಚಿಮ, ದಕ್ಷಿಣ ಪ್ರಾಂತ್ಯದ ಕಮಾಂಡ್‌ಗಳಲ್ಲಿ ನೇಮಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ಎರಡು ತಂಡಗಳು ಟಿಬೇಟ್ ಮತ್ತು ಭಾರತದ ಗಡಿಗಳ ಮೇಲೆ ಕಣ್ಣಿಟ್ಟಿದೆ.
ವಾಸ್ತವ ನಿಯಂತ್ರಣ ಗಡಿ ರೇಖೆಯಿಂದ ಭಾರತ ಮತ್ತು ಚೀನಾ ಸೈನಿಕರನ್ನು ಬೇರ್ಪಡಿಸುವ ಪ್ರಕ್ರಿಯೆಗಳು ನಡೆಯುತ್ತಿರುವ ಹೊತ್ತಲ್ಲೆ ಚೀನಾ ಮತ್ತೆ ತನ್ನ ಸೈನಿಕರನ್ನು ನಿಯೋಜನೆ ಮಾಡುವ ಪ್ರಕ್ರಿಯೆ ಶುರು ಮಾಡಿದೆ.

ಚೀನಾ ಸೇನೆಯಲ್ಲಿ ಕರ್ನಲ್ ದರ್ಜೆಯ ಅಧಿಕಾರಿಗಳನ್ನು ಪಾಕ್ ಚೀನಾ ಸೇನೆಯಲ್ಲಿ ಸೆರ್ಪಡೆ ಮಾಡಿದ್ದು ಭಾರತದ ವಿರುದ್ಧ ನಡೆಯುತ್ತಿರುವ ಪಾಕ್ ಚೀನಾದ ಜಂಟಿ ಕಾರ್ಯಚರಣೆ ಎನ್ನಲಾಗಿದೆ. ಈ ಎರಡು ದೇಶಗಳು ಪರಸ್ಪರ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ ಎಂದು ಗುಪ್ತಚರ ಇಲಾಖೆ ಉಲ್ಲೇಖಿಸಿದೆ.
Karnataka By Election : ಉಪ ಚುನಾವಣೆ ಸಮರ : ಎರಡೂ ಕ್ಷೇತ್ರಗಳಲೂ ಮುಸ್ಲಿಂ ಅಭ್ಯರ್ಥಿಗಳಿಗೆ ಜೆಡಿಎಸ್ ಮಣೆ https://t.co/8kRxk1ThsK #ByElection, #Hanagal, #Sindagi, #NiazShaikh, #NaziaShakeela #Anagadi, #Karnataka, #JDS, #HDKumaraswamy, #HDDevegowda
— Secular TV (@SecularTVKannad) October 1, 2021
IPL ತಂಡ ತೊರೆದ ಕ್ರಿಸ್ ಗೇಲ್ https://t.co/3oKsGoaCfn #ChrisGayle #IPL2021 #IPL #IPL2O21 #SaddaPunjab #PunjabKings
— Secular TV (@SecularTVKannad) October 1, 2021