ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ಸತೀಶ ನೀನಾಸಂ ಅವರ ತಾಯಿ ಚಿಕ್ಕ ತಾಯಮ್ಮ (85) ಇಂದು ತಮ್ಮ ನಿವಾಸದಲ್ಲಿ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ.

ಅವರು ಆರ್ ಆರ್ ನಗರದಲ್ಲಿರುವ ತಮ್ಮ ಮಗ ಸತೀಶ್ ನೀನಾಸಂ ನಿವಾಸದಲ್ಲಿ ವಾಸವಿದ್ದರು. ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಸತೀಶ್ ಮತ್ತು ಅವರ ಹೆಂಡತಿ ಇಬ್ಬರು ಚಿಕ್ಕತಾಯಮ್ಮ ಅವರ ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಿದ್ದರು. ಚಿಕ್ಕತಾಯಮ್ಮ ಅವರಿಗೆ ಸತೀಶ ಸೇರಿದಂತೆ ಒಟ್ಟು ನಾಲ್ಕು ಜನ ಗಂಡುಮಕ್ಕಳು ಹಾಗೂ ನಾಲ್ಕು ಜನ ಹೆಣ್ಣುಮಕ್ಕಳು ಇರುವರು, ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ. ಚಿತ್ರರಂಗದ ಅನೇಕ ಗಣ್ಯರು ಹಾಗೂ ಬಂಧು ಮಿತ್ರು ಚಿಕ್ಕತಾಯಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.