ದುಬೈ : ದೇಶಕ್ಕೆ ಮಾಜಿ ಕೂಲ್ ಕ್ಯಾಪ್ಟನ್ ಆಗಿದ್ದರು ಧೋನಿ, ತಂಡವನ್ನು ಸದಾ ಯಶಸ್ಸಿನ ಹಾದಿಯಲ್ಲಿಯೇ ಸಾಗಿಸುವ ನಾವಿಕನೂ, ತಮಿಳುನಾಡಿನ ಪ್ರೀತಿಯ THALA, ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ಕ್ರಿಕೆಟರ್, ಸಿಎಸ್ ಕೆ ಯ ನಾಯಕ ಎಂ.ಎಸ್ ಧೋನಿ ಮತ್ತೆ ಕೊನೆಯ ಓವರನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಮಾಮೂಲಿ ಶೈಲಿಯಲ್ಲಿ ಗೇಮ್ ಫಿನಿಶ್ ಮಾಡಿ ಹೈದರಾಬಾದ್ ವಿರುದ್ಧ ವಿಜಯ ಗಳಿಸಿದರು.

ಗೇಮ್ ಫಿನಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳಿಗೆ ಸಾಕಷ್ಟು ಮೆಚ್ಚುಗೆಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಧೋನಿ ಅಭಿಮಾನಿ ಬಳಗವು ಸಿಕ್ಸರ್ ಕುರಿತು ಫೋಸ್ಟ್ ಹಂಚಿಕೊಂಡು ಮನರಂಜನೆಗೊಂಡಿದ್ದಾರೆ. ಇನ್ನೂ ಎರಡೂ ಎಸೆತಗಳು ಬಾಕಿ ಇರುವಾಗಲೇ ಎಂ ಎಸ್ ಧೋನಿ ಹಳೆಯ ಶೈಲಿಯಲ್ಲಿ ಬಲವಾದ ಹೊಡೆತದಿಂದ ಸಿಕ್ಸರ್ ಸಿಡಿಸಿ ಅಭಿಮಾನಿಗಳಿಗೆ ಮತ್ತೆ ಗೇಮ್ ಫಿನಿಶರ್ ಶೈಲಿಯನ್ನು ನೆನಪಿಸಿದರು. ಇನ್ನೂ ವಿಶೇಷ ಎಂದರೇ ಧೋನಿ ಅವರ ನಿಜವಾದ ಜೀವನಾಧಾರಿತ
ಚಿತ್ರ ಸೆಪ್ಟೆಂಬರ್ 30ರಂದು MS Dhoni (The Untold story) ತೆರೆಕಂಡ ದಿನದಂದೇ ಹಾಗೂ ಈ ದಿನವನ್ನು ನೆನಪು ಇಟ್ಟುಕೊಂಡಿದ್ದ ಅಭಿಮಾನಿಗಳು, ಮಾಹೀ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಸುತ್ತಿದ್ದಂತೆ ಸುಶಾಂತ್ ಸಿಂಗ್ ರಜಪೂತ ಅವರನ್ನು ನೆನಪಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಧೋನಿ ಅವರನ್ನು ಟ್ರೆಂಡಿಂಗ್ನಲ್ಲಿ ತೇಲಾಡಿಸಿದರು.

ಎಸ್ ಆರ್ ಎಚ್ ವಿರುದ್ಧ ಕೊನೆಯ ಓವರ್ ನಲ್ಲಿ(19.4) ಇನ್ನೂ ಎರಡೂ ಎಸೆತಗಳು ಬಾಕಿ ಇರುವಾಗಲೇ ಎಂ ಎಸ್ ಧೋನಿ ಸಿಕ್ಸರ್ ಸಿಡಿಸಿ ಹಳೆಯ ರೂಡಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಮ್ಯಾಚ್ ಫಿನಿಶ್ ಮಾಡಿದರು. ಪತಿ ಧೋನಿಯ ಬ್ಯಾಟಿಂಗ್ ವೀಕ್ಷಿಸಲು ಬಂದಿದ್ದ ಪತ್ನಿ ಸಾಕ್ಷಿ ಅವರ ಮುಂದೆಯೇ ಈ ದೃಶ್ಯಗಳು ಸಾಕ್ಷಿಯಾದವು.

ಇನ್ನು ಪ್ಲೇ ಆಫ್ ಪ್ರವೇಶಿಸುವ ಸಿಎಸ್‌ಕೆ 11ನೇ ಬಾರಿಗೆ ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಫ್ ಎಂಟ್ರಿ ಕೊಟ್ಟ ಏಕೈಕ ಟೀಮ್ ಚೆನೈ ಸೂಪರ್ ಕಿಂಗ್ಸ್ ಮಾತ್ರ ಆಗಿದ್ದು ಇದು ಕೂಡ ಸಾಧ್ಯವಾಗಿದ್ದು ಎಂ.ಎಸ್ ಧೋನಿ ನಾಯಕತ್ವದ ಮತ್ತೊಂದು ಸಾಧನೆಗಳ ಸುರಿಮಳೆಗೆ ಸೇರಿಕೊಂಡಿದೆ.
ಇದನ್ನೂ ಓದಿ : ಟಿ 20 ವಿಶ್ವಕಪ್: ಎಂಎಸ್ ಧೋನಿಯನ್ನು ಮಾರ್ಗದರ್ಶಕರಾಗಿ ಏಕೆ ಕರೆತರಲಾಯಿತು ?
2020ರಲ್ಲಿ ಮಾತ್ರ ಫ್ಲೇ ಆಫ್ ಕೈಚೆಲ್ಲಿದ್ದ ಸಿಎಸ್‌ಕೆ ಬರೋಬ್ಬರಿ 11 ಬಾರಿಗೆ ಪ್ಲೇ ಆಫ್ ಪ್ರವೇಶಿಸುವ ಮೂಲಕ ಹೊಸ ದಾಖಲೆ ಮಾಡಿದ್ದು ಈ ವರ್ಷದ ಐಪಿಎಲ್ ಪ್ಲೇ ಆಫ್ ಗಿಟ್ಟಿಸಿಕೊಂಡ ಮೊದಲ ತಂಡವಾಗಿದೆ.