ನವದೆಹಲಿ : ಇತ್ತೀಚೆಗಷ್ಟೆ ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ಆಗಿ ಅಧಿಕಾರ ಸ್ವೀಕರಿಸಿದ್ದ ಅನುರಾಗ್ ಮೆಹ್ರೋತ್ರಾ ಅವರು ಈಗ ಕಂಪನಿಗೆ ವಿದಾಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಅವರು ಟಾಟಾ ಮೋಟಾರ್ಸ್ ಉಪಾಧ್ಯಕ್ಷರಾಗಿ ಸೇರಿದ್ದಾರೆ ಎಂದು ವರದಿಯಾಗಿದೆ. ಅವರು ಶುಕ್ರವಾರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಟಾಟಾ ಮೋಟಾರ್ಸ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ Automobile ದೈತ್ಯ FORD

ಅನುರಾಗ್ ಕಳೆದ ಹತ್ತು ವರ್ಷಗಳಿಂದ ಫೋರ್ಡ್ ಇಂಡಿಯಾದಲ್ಲಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರನ್ನು ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಯಿತು. ಏತನ್ಮಧ್ಯೆ, ಭಾರತದಲ್ಲಿ ಕಾರುಗಳ ತಯಾರಿಕೆಯನ್ನು ನಿಲ್ಲಿಸಲು ಫೋರ್ಡ್ ನಿರ್ಧರಿಸಿದರ ಬಗ್ಗೆ ಅನುರಾಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಪನಿಗೆ ಅವರು ವಿದಾಯ ಹೇಳಿರಬಹುದು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಲಾಭದಾಯಕವಲ್ಲ ಎಂದು ಫೋರ್ಡ್ ಅಭಿಪ್ರಾಯಪಟ್ಟಿತ್ತು. ಅದಕ್ಕಾಗಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಫೋರ್ಡ್ ಇಂಡಿಯಾದ ನಿರ್ಧಾರದ ಈ ಅಸಮಾಧಾನದಿಂದ ಅನುರಾಗ್ ಫೋರ್ಡ್ ಇಂಡಿಯಾಕ್ಕೆ ರಾಜೀನಾಮೆ ನೀಡಿದಂತೆ ತೋರುತ್ತಿದೆ