ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಗಮಿಸಿದ ದಿನದಿಂದ ಇಲ್ಲಿಯವರೆಗೂ ನನ್ನಲ್ಲಿ ಒಳ್ಳೆಯ ಅನುಭವವಾಗುತ್ತಿದೆ. ಇಲ್ಲಿನ ತರಬೇತಿ ದಿನಚರಿ ಹಾಗೂ ತರಬೇತಿ ಹೊರಗಡೆಯ ದಿನಚರಿ ನನಗೆ ತುಂಬಾ ಇಷ್ಟವಾಯಿತು ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಗೆಲುವಿನ ಸಂತಸ ವ್ಯಕ್ತಪಡಿಸಿದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಬೆಂಗಳೂರು ಫ್ರಾಂಚೈಸಿಗೆ ಬಂದಾಗಿನಿಂದಲೂ ನನ್ನಲ್ಲಿ ಒಳ್ಳೆಯ ಅನುಭವವಾಗುತ್ತಿದೆ ಎಂದಿದ್ದಾರೆ.. ಇನ್ನೂ ನಿನ್ನೆ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 30 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 50 ರನ್ ಗಳಿಸಿದ್ದಾರೆ. ಆರ್‌ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಆಟವಾಡಿದ್ರು.. ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ರು ಅನ್ನುವ ನಿಂದನೆಗೂ ಒಳಗಾಗಿದ್ರು . ಆದರೆ ಅವರನ್ನು ಹರಾಜಿನಲ್ಲಿ ಆರ್‌ಸಿಬಿ 14.25 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ಆರ್‌ಸಿಬಿ ತಂಡದಲ್ಲಿ ಮ್ಯಾಕ್ಸ್‌ವೆಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕೊಹ್ಲಿ ಹಾಗೂ ಎಬಿಡಿ ಮೇಲಿನ ಭಾರವನ್ನು ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ : ಚಾಲೆಂಜರ್ಸ್ ಗೆ ರಾಯಲ್ ಗೆಲುವು
ಪಂದ್ಯದ ಬಳಿಕ ಮಾತನಾಡಿದ ಗ್ಲೆನ್ ಮ್ಯಾಕ್ಸ್‌ವೆಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಗಮಿಸಿದಾಗಿನಿಂದಲೂ ನನಗೆ ಒಳ್ಳೆಯ ಅನುಭವವಾಗುತ್ತಿದೆ. ಇಲ್ಲಿನ ತರಬೇತಿ ದಿನಚರಿ ಹಾಗೂ ತರಬೇತಿ ಹೊರಗಡೆಯ ದಿನಚರಿ ಎಲ್ಲವೂ ಅತ್ಯುತ್ತಮವಾಗಿದೆ. ಇದೆಲ್ಲವೂ ನನಗೆ ನೆರವಾಗುತ್ತಿದೆ. ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದಾರೆ.
ಇತರೆ ಫ್ರಾಂಚೈಸಿಗಳಿಂತ ಬೆಂಗಳೂರು ಫ್ರಾಂಚೈಸಿ ತುಂಬಾ ವಿಭಿನ್ನವಾಗಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ನಾವು ಗುಂಪನ್ನು ಹೇಗೆ ರಚಿಸಿಕೊಂಡಿದ್ದೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಒಬ್ಬರ ಮೇಲೆಯೇ ಅವಲಂಬಿತವಾಗದೆ, ವಿಭಿನ್ನ ಸಂಗತಿಗಳನ್ನು ನಿರ್ವಹಿಸುವ ಹುಡುಗರ ಗುಂಪನ್ನು ಹೊಂದಿರುವುದು ಅತ್ಯುತ್ತಮವಾಗಿದೆ. ಇದು ನಿಜಕ್ಕೂ ಆನಂದದಾಯಕ ಗುಂಪಾಗಿದೆ. ಎಂದು ಮ್ಯಾಕ್ಸ್‌ವೆಲ್ ಸಂತಸ ವ್ಯಕ್ತಪಡಿಸಿದ್ದಾರೆ.
IPL RCb Glenn maxwell