ಮಂಡ್ಯ: ಕೊರೊನಾದ ಮೂರನೇ ಅಲೆಯ ಆತಂಕದ ಮಧ್ಯೆಯು ಪ್ರಾಥಮಿಕ ತರಗತಿ ತೆರೆಯುವ ಚರ್ಚೆ ನಡೆಯುತ್ತಿದೆ.. ಆದ್ರೆ ರಾಜ್ಯದ ಕೆಲವೊಂದು ಶಾಲಾ-ಕಾಲೇಜುಗಳು ಕೊರೊನಾ ಹಾಟ್ಸ್ಪಾಟ್ ಆಗ್ತಿವೆಯಾ ಅನ್ನೋ ಅನುಮಾನ ಶುರುವಾಗಿದೆ.

ಹೌದು ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೊರೋನಾ ಸ್ಪೋಟಗೊಂಡಿದೆ.. ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕಾಲೇಜಿನ ಒಟ್ಟು 412 ವಿಧ್ಯಾರ್ಥಿನಿಯರಿದ್ದು, 28 ಮಂದಿಗೆ ಸೋಂಕು ದೃಢವಾಗಿದೆ.
ಇದನ್ನೂ ಓದಿ : Breaking News : ತೆರಿಗೆ ಪಾವತಿ ಬಾಕಿ ಕಾರಣ ಮಂತ್ರಿ ಮಾಲ್ ಗೆ ಬೀಗ ಜಡಿದ ಬಿಬಿಎಂಪಿ ಅಧಿಕಾರಿಗಳು
ಸದ್ಯ ಸೋಂಕಿತರಿಗೆ ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸ್ಪೋಟಗೊಂಡಿರೋ ಹಿನ್ನೆಲೆ ಒಂದು ವಾರ ಕಾಲೇಜು ಸೀಲ್ ಡೌನ್ ಮಾಡಲಾಗಿದೆ.