ಬೆಂಗಳೂರು : ಧಾರಾವಾಹಿ ಹಾಗೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸೌಜನ್ಯಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ನಡೆದಿದೆ. ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡೆತ್ನೋಟ್ ಬರೆದಿಟ್ಟು ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೊಡ್ಡ ಬೆಲೆ ಗ್ರಾಮದ ಸನ್ ವರ್ಥ್ ಅಪಾರ್ಟ್ಮೆಂಟ್ನಲ್ಲಿ ನಟಿ ಸೌಜನ್ಯಾ ವಾಸಿಸುತ್ತಿದ್ದರು. ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಡೆತ್ನೋಟ್ ಸೌಜನ್ಯ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ, ನನ್ನನ್ನು ಕ್ಷಮಿಸಿ ಬಿಡಿ ಎಂದು ಪತ್ರದಲ್ಲಿ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗ್ತಿದೆ.

ಸೌಜನ್ಯ ಮೂಲತಃ ಕುಶಾಲನಗರದವರು. ತಮ್ಮ ಗೆಳೆಯನೊಂದಿಗೆ ಕೆಲ ತಿಂಗಳಿನಿಂದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಸೌಜನ್ಯ ಕನ್ನಡದ ಹಲವು ಧಾರಾವಾಹಿ ಹಾಗೂ ಚೌಕಟ್ಟು, ಫನ್ ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಬೆಳಗ್ಗೆ ತನ್ನ ಗೆಳೆಯನಿಗೆ ಊಟ ತರಲು ಹೇಳಿ ಮನೆಯಿಂದ ಸೌಜನ್ಯ ಹೊರಕಳುಹಿಸಿದ್ದರು. ಆತ ಮನೆಗೆ ವಾಪಸ್ ಬರೋ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಪಾರ್ಟ್ಮೆಂಟ್ಗೆ ಗೆಳೆಯ ವಾಪಸ್ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ; 9 ತಿಂಗಳ ಮಗುವನ್ನು ತಾಯಿಯೇ ಹತ್ಯೆ ಮಾಡಿರುವುದು ದೃಢ
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಬಳಿ ಪತ್ತೆಯಾಗಿರೋ ಡೆಥ್ ನೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪತ್ರದಲ್ಲಿ ನನಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದೆ. ಆದರೆ ಯಾರಿಗೂ ಹೇಳಿಕೊಳ್ಳಲು ಆಗುತ್ತಿಲ್ಲ. ಸಾಕಷ್ಟು ಬಾರೀ ಚಿಕಿತ್ಸೆ ಪಡೆದುಕೊಂಡರು ಸರಿಹೋಗುತ್ತಿಲ್ಲಾ. ಆದ್ದರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿರೋದಾಗಿ ಬರೆದಿದ್ದಾರೆ ಎನ್ನಲಾಗ್ತಿದೆ.
Serial actor heroin suicide Bangalore