ಬೆಂಗಳೂರು : ದಸರಾ ಬಳಿಕ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಈ ವಾರದಲ್ಲಿ ಸಿಎಂ ಹಾಗೂ ಕೊವಿಡ್ ತಾಂತ್ರಿಕಾ ಸಲಹಾ ಸಮಿತಿ ಜೊತೆ ಸಭೆ ಮಾಡಲಾಗುವುದು. ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ.

ಸಭೆಯಲ್ಲಿ ಒಂದರಿಂದ ಐದರವರೆಗೆ ಶಾಲೆಗಳ ಆರಂಭಕ್ಕೆ ಮನವಿ ಮಾಡುತ್ತೇವೆ. ತಜ್ಞರ ಶಿಫಾರಸ್ಸಿನ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.. ಸದ್ಯ ರಾಜ್ಯದಲ್ಲಿ ವೈರಲ್ ಇನ್ಫೆಕ್ಷನ್, ಡೆಂಘೀ ಜ್ವರದ ಕಾಟ ಇದೆ. ಚಿಕ್ಕ ಮಕ್ಕಳಲ್ಲೂ ಕಾಣಿಸಿಕೊಳ್ತಿದೆ.. ಇದು ಆತಂಕಕ್ಕೆ ಕಾರಣವಾಗಿದೆ.. ಆದ್ರೆ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಶಾಲಾರಂಭ ಅವಶ್ಯಕ ಎಂದರು.. ಇನ್ನೂ ಸಭೆಯಲ್ಲಿ 3,4,5 ನೇ ತರಗತಿ ಆರಂಭಿಸಲು ಅನುಮತಿ ಕೇಳಲಿದ್ದೇವೆ..ಆದ್ರೆ ಅಂತಿಮವಾಗಿ ತಜ್ಞರ ಅಭಿಪ್ರಾಯದ ಮೇಲಎ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಕೋವಿಡ್ ಹಿನ್ನಲೆ ಕಳೆದ 19 ತಿಂಗಳಿಂದ ಪ್ರಾಥಮಿಕ ತರಗತಿಗಳು ಬಂದ್ ಆಗಿವೆ. ಖಾಸಗಿ ಶಾಲೆಗಳುಆನ್ ಲೈನ್ ಶಿಕ್ಷಣ ನೀಡ್ತಿವೆ.
Karnataka primary School Reopen education minister Covid expert committee