ಬೆಂಗಳೂರು : ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ದಾಖಲೆ ಧೃಡಪಟ್ಟಿದೆ. 9 ತಿಂಗಳ ಮಗುವನ್ನು ತಾಯಿಯೇ ಹತ್ಯೆ ಮಾಡಿರುವುದು ದೃಢವಾಗಿದೆ.

ಮೆಡಿಕಲ್ ರಿಪೋರ್ಟ್ ಸದ್ಯ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದ್ದು ತಾಯಿಯೇ ಮಗುವನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ ಮಗು ಹತ್ಯೆಯಾಗಿದೆ ಎಂದು ಮೆಡಿಕಲ್ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿದೆ.
ಹಸಿರು ಬಣ್ಣದ ಬಟ್ಟೆಯಿಂದ ಮಗುವಿನ ಕತ್ತನ್ನ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಗುವನ್ನ ಹತ್ಯೆ ಮಾಡಿ ಬಳಿಕ ತಾಯಿ ಸಿಂಧೂರಾಣಿ ನೇಣು ಬಿಗಿದುಕೊಂಡಿದ್ದಾಳೆ. ಮಗುವಿನ ಕೊಲೆ ರಿಪೋರ್ಟ್ ಬಂದ ಹಿನ್ನೆಲೆ ಮತ್ತೊಂದು ಎಫ್ಐಆರ್ ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.